

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜಕುಮಾರ ಕಪನೂರ ಆ್ಯಂಡ್ ಗ್ಯಾಂಗ್ ಕಲಬುರಗಿಯ ಪ್ರತಿಷ್ಠಿತ ನಾಲ್ವರ ಹತ್ಯೆಗೆ ಸಂಚು ರೂಪಿಸಿರುವುದನ್ನು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪಾಂಚಾಳ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದು, ನೈತಿಕತೆ ಇದ್ರೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸವಾಲೆಸೆದಿದ್ದಾರೆ.
ದಿನೇದಿನೆ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಂದಾಗಿ ಶರಣರ ನಾಡು ರಾಜ್ಯ ಮತ್ತು ದೇಶದ ಗಮನ ಸೆಳೆಯುತ್ತಿದೆ. ಸಿ.ಟಿ. ರವಿ, ಮುನಿರತ್ನ ಮೇಲೆ ಹಲ್ಲೆ ಮಾಸುವ ಮುನ್ನವೇ ಬೀದರ್‌ನಲ್ಲಿ ಕಾಂಗ್ರೆಸ್ ಮುಖಂಡರ ಕಿರುಕುಳಕ್ಕೆ ೨೬ ವರ್ಷದ ಯುವ ಗುತ್ತಿಗೆದಾರ ಬಲಿಯಾಗಿದ್ದು, ಆತನ ಡೆತ್‌ನೋಟ್ ಕಲಬುರಗಿಯತ್ತ ಬೊಟ್ಟು ತೋರಿಸುತ್ತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡೆತ್‌ನೋಟ್ ಹಾಳೆ ಮೇಲಿನ ಅಕ್ಷರ ಎಂದು ತಿಳಿಯದೆ ಗಂಭೀರ ಪರಿಗಣಿಸಬೇಕು. ಸಚಿವರ ಆಪ್ತ ರಾಜು ಗ್ಯಾಂಗ್ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ ಸ್ವಾಮೀಜಿ, ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಒದೆಯಿರಿ, ಬಡಿಯಿರಿ ಎಂದು ಎನ್ನುತ್ತಾರೆ. ಅವರ ಆದರ್ಶದಲ್ಲಿ ನಡೆಯುವ ಗ್ಯಾಂಗ್ ಹತ್ಯೆ ಮಟ್ಟಕ್ಕೆ ಹೋಗಿದೆ. ಆನೆ ನಡೆದಿz್ದೆÃ ದಾರಿ ಎನ್ನುವಂತೆ ವರ್ತಿಸುತ್ತ ಪೊಲೀಸ್, ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡುವಂಥ ಬಲಾಢ್ಯರು ಸಚಿವರ ಹಿಂದೆ ಇದ್ದಾರೆ ಎಂದು ಕಿಡಿಕಾರಿದರು.
ಜಿಲ್ಲೆಯ ಮಹಾಮಂತ್ರಿ ಎನ್‌ಕೌಂಟರ್ ಹೇಗಾಗುತ್ತೆ? ಇದೇನು ಬಿಹಾರವೇ ಅಂದಿದ್ದರು. ಪ್ರಸ್ತುತ ಜಿಲ್ಲೆ ಅಪರಾಧಗಳಿಂದಾಗಿ ಬಿಹಾರನ್ನೂ ಮೀರಿಸುತ್ತಿದೆ. ತಿಹಾರ್ ಜೈಲಲ್ಲಿ ಇರಬೇಕಿದ್ದವರು ವಿಧಾನಸೌಧದಲ್ಲಿದ್ದಾರೆ. ಗಲ್ಲಾ ಚೋರ್, ಚಾವಲ್ ಚೋರ್‌ಗಳನ್ನು ಎಲ್ಲಿಟ್ಟಿದ್ದಾರೆ? ಪಿಡಿಒ ಪ್ರಶ್ನೆಪತ್ರಿಕೆ ಔಟ್ ಆಗಿದ್ದು, ತನಿಖೆ ಏನಾಯ್ತು? ಕೆಕೆಆರ್‌ಡಿಬಿ ಅಕ್ರಮದ ತನಿಖೆ ಎಲ್ಲಿಗೆ ಬಂತು? ಪಿಎಸ್‌ಐ ಹಗರಣ ತನಿಖಾ ಹಂತದಲ್ಲೇ ಪಿಐಎಲ್ ಹಾಕಿದ್ದು ಏನಾಯ್ತು ಎಂದು ಪ್ರಶ್ನಿಸಿದರು.
ರೌಡಿಗಳ ಜತೆಗೆ ಸಂಬAಧವಿಲ್ಲ ಎಂದು ಅವರ ಬಾಯಲ್ಲಿ ಸಿಹಿ ಇಡುವ ಸಚಿವರು, ಬೇರೆಯವರ ಮಕ್ಕಳ ಬಾಯಲ್ಲಿ ಮಣ್ಣು ಹಾಕುತ್ತಿದ್ದಾರೆ. ಪ್ರಶ್ನಿಸಿದರೆ ಜಗ್ಗಲ್ಲ ಬಗ್ಗಲ್ಲ ಕುಗ್ಗಲ್ಲ ಎನ್ನುತ್ತಾರೆ ಅವರ ಭಂಡರು ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ವಾಮೀಜಿ, ಕಲಬುರಗಿಯ ಬ್ಲಡ್ ಬ್ಯಾಂಕ್‌ನಲ್ಲಿ ಸಿಗರೇಟ್ ಕದ್ದಿದ್ದಕ್ಕೆ ದಲಿತ ಯುವಕನ ಕೊಲೆ ಆಯ್ತು. ಆರೋಪಿಗಳು ತಮ್ಮ ಕುಟುಂಬದ ಆಪ್ತರಿದ್ದುದರಿಂದ ಸಚಿವರು ಒಂದೇ ಒಂದು ಮಾತು ಆಡಲಿಲ್ಲ ಎಂದರು.
ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಸಂಗಮೇಶ ವಾಲಿ ಇದ್ದರು.