ನಾಡಿಗೆ ಶಿವರಾತ್ರಿ ರಾಜೇಂದ್ರ ಶ್ರೀಗಳ ಕೊಡುಗೆ ದೊಡ್ಡದು

07 SARAG 4
filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.025880; highlight: 1; algolist: 0; multi-frame: 1; brp_mask: 8; brp_del_th: 0.0007,0.0000; brp_del_sen: 0.1500,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 34;
Published on

ಸರಗೂರು : ನಾಡಿಗೆ ಶಿವರಾತ್ರಿ ರಾಜೇಂದ್ರ ಶ್ರೀಗಳ ಕೊಡುಗೆ ದೊಡ್ಡದು ಎಂದು ವಿಶ್ರಾಂತ ಕುಲಪತಿ ಪದ್ಮಾಶೇಖರ್ ಹೇಳಿದರು.

ಬಿಡಗಲು ಗ್ರಾಮದ ಪಡುವಲು ವಿರಕ್ತ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಣ್ಣಿಮೆ ಪೂಜೆ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 110 ನೇ ಜಯಂತಿ ಮತ್ತು ದತ್ತಿ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಕ್ಷರ, ಅನ್ನ ಹಾಗೂ ಆರೋಗ್ಯ ದಾಸೋಹ ಮಾಡಲು ಪ್ರಧಾನ ಆದ್ಯತೆ ನೀಡಿದ್ದ ರಾಜೇಂದ್ರ ಶ್ರೀಗಳು, ಗುರು ಪರಂಪರೆಗೆ ಗೌರವ ನೀಡಿದ್ದರು. ಗ್ರಾಮೀಣ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಅವರ ಸೇನೆ ಅನನ್ಯವಾಗಿದೆ ಎಂದರು. ಭಾರತೀಯ ಸಂಸ್ಕೃತಿ ಉದಾತ್ತವಾಗಿದೆ. ಇದನ್ನು ಅನಾದಿಕಾಲದಿಂದಲೂ ಸಾಧು-ಸಂತರು ಉಳಿಸಿಕೊಂಡು ಬಂದಿದ್ದಾರೆ. ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ವಿಶ್ವ ಬಂಧುತ್ವ ಮತ್ತು ವಿಶ್ವಶಾಂತಿ ಸಾರುವ ನಮ್ಮ ಸಂಸ್ಕೃತಿ ವಿಶ್ವಕ್ಕೇ ದೊಡ್ಡದು ಎಂದರು.

ಸಾನ್ನಿಧ್ಯ ವಹಿಸಿದ್ದ ಪಡುವಲು ಶ್ರೀ ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿ, ರಾಜೇಂದ್ರ ಶ್ರೀಗಳು ಕರುಣಾಮಯಿಗಳು. ತ್ಯಾಗದಿಂದಲೇ ಅವರು ಹೊಸ ಇತಿಹಾಸ ಬರೆದರು. ಮಠವು ಇಂದು ವಿಶ್ವ ಮಟ್ಟದಲ್ಲಿ ಬೆಳೆಯಲು ಭದ್ರ ಬುನಾದಿ ಹಾಕಿದವರು ಎಂದು

ಸ್ಮರಿಸಿದರು. ಲಿಂಗ ಪೂಜೆಗಿಂತ ಜಂಗಮ ಸೇವೆಯೇ ಶ್ರೇಷ್ಠ ಎಂದು ಅವರು ನಂಬಿದ್ದರು. ನಿರಂತರವಾಗಿ ಅವರು ಸೇವಾ ಕಾರ್ಯಗಳನ್ನು ಮಾಡಿದ್ದರಿಂದಲೇ ಇಂದಿಗೂ ಸ್ಮರಣೀಯರಾಗಿದ್ದಾರೆಂದರು. ಮಡಿವಾಳ ಸ್ವಾಮಿ ಮಠದ ಶ್ರೀ ಅಡವಿ ಸ್ವಾಮೀಜಿ, ಡಾ. ಹೆಳವರಹುಂಡಿ ಸಿದ್ದಪ್ಪ, ಜಿಲ್ಲಾ ಕೇಂದ್ರ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸದಾನಂದ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ, ಮಠದ ಆಡಳಿತಾಧಿಕಾರಿ ಕೆ . ಕೆಂಪಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net