ಕೊಡಗಿಗೆ ಆಗಮಿಸಿದ ಸಂತ ಜ್ಞಾನಸಂಬ0ಧರ್ ಸ್ವಾಮೀಜಿ

swamiji
Published on

ಕುಶಾಲನಗರ:

ತಮಿಳುನಾಡಿನ 27 ಭವ್ಯ ಶಿವ ದೇವಾಲಯಗಳ ಧರ್ಮಪುರಂ ಅಧೀನ ಮಠಾಧಿಪತಿ ಸಂತ ಜ್ಞಾನಸಂಬAಧರ್ ಸ್ವಾಮೀಜಿ ಮಂಗಳವಾರ ಕೊಡಗಿಗೆ ಆಗಮಿಸಿದರು. ಈ ಸಂದರ್ಭ ಜ್ಞಾನಸಂಬAಧರ್ ಸ್ವಾಮೀಜಿ ಅವರನ್ನು ಜಿಲ್ಲೆಯ ಪ್ರವೇಶದ್ವಾರ ಕುಶಾಲನಗರದ ಕಾವೇರಿ ಪ್ರತಿಮೆ ಬಳಿ ಕುಶಾಲನಗರದ ಪ್ರಮುಖರು ಸ್ವಾಗತಿಸಿ ಆಶೀರ್ವಾದ ಪಡೆದುಕೊಂಡರು.

ಈ ವೇಳೆ ರಾಮನಾಥನ್, ಚಂದ್ರಶೇಖರ್ ಹೇರೂರು, ಮಧುಸೂದನ್, ಮಹೇಶ್ ಅಮಿನ್, ಮಧು, ರಾಮಸ್ವಾಮಿ, ವಿಘ್ನೇಶ್, ಬಾಲಕೃಷ್ಣ ಮತ್ತಿತರರು ಇದ್ದರು.

ಸಂತ ಜ್ಞಾನಸಂಬAಧರ್ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಪ್ರಾಚೀನ ಪರಂಪರೆಯ ಧರ್ಮದಂಡ ಸೆಂಗೋಲ್ ಅನ್ನು ದೆಹಲಿಯ ನೂತನ ಸಂಸತ್ ಭವನ ಉದ್ಘಾಟನೆ ಸಂದರ್ಭ ಹಸ್ತಾಂತರಿಸುವ ಮೂಲಕ ಸುದ್ದಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net