

ಕುಶಾಲನಗರ:
ಸಮೀಪದ ಗುಡ್ಡೆಹೊಸೂರುವಿನಲ್ಲಿ ರಾಷ್ಟಿçÃಯ ಹೆದ್ದಾರಿ 275ರಲ್ಲಿರುವ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶ್ರೀಗಳ ಆರನೇ ವರ್ಷದ ಪುಣ್ಯಸ್ಮರಣೆ ಮತ್ತು ದಾಸೋಹ ಕಾರ್ಯಕ್ರಮ ಮಂಗಳವಾರ ನಡೆಯಿತು. ಈ ಹಿನ್ನೆಲೆಯಲ್ಲಿ ಶ್ರೀಗಳ ವೃತ್ತವನ್ನು ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜುನ ಮಾತನಾಡಿ ಶಿವಕುಮಾರ ಸ್ವಾಮೀಜಿ ಇದ್ದಷ್ಟು ದಿನ ಇಡೀ ನಾಡು ಸುಭಿಕ್ಷವಾಗಿತ್ತು. ಎಲ್ಲರೂ ಶ್ರೀಗಳ ಆದರ್ಶಗಳನ್ನು ಪಾಲಿಬೇಕು ಎಂದರು.
ಶ್ರೀ ಸಿದ್ದಗಂಗಾ ಭಕ್ತಮಂಡಳಿ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಸಿದ್ದಗಂಗಾ ಕ್ಷೇತ್ರ ಇಡೀ ನಾಡಿನ ಪರಮ ಪುಣ್ಯಕ್ಷೇತ್ರವಾಗಿದ್ದು ಡಾ.ಶಿವಕುಮಾರ ಸ್ವಾಮೀಜಿ ಎಲ್ಲಾ ಕಾಲಕ್ಕೂ ಪ್ರಾತಃಸ್ಮರಣೀಯರಾಗಿ ಉಳಿಯಲಿದ್ದಾರೆ. ಶ್ರೀಗಳ ಹೆಸರಲ್ಲಿ ವೃತ್ತ ಮಾಡಲು ಸಹಕರಿಸಿದ ಎಲ್ಲರನ್ನೂ ಸ್ಮರಣೀಯರು ಎಂದರು.
ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷ ಪ್ರವೀಣ್, ಪಿಡಿಒ ಸುಮೇಶ್, ಸದಸ್ಯರಾದ ಲಕ್ಷ್ಮಣ್, ನಾರಾಯಣ್, ಭಕ್ತಮಂಡಳಿ ಸಂಚಾಲಕ ಬಿ.ನಟರಾಜು, ಗುಡ್ಡೆಹೊಸೂರು ವೀರಶೈವ ಸಮಾಜದ ಕಾರ್ಯದರ್ಶಿ ದ್ರಾಕ್ಷಾಯಿಣಿ, ನಿರ್ದೇಶಕರಾದ ಶುಭಶೇಖರ್, ಕಾಶಿ, ಶೋಭಾ, ಕವಿತಾ, ವೈಶಾಲಿ, ಷಣ್ಮುಖ, ಬಿ.ಟಿ.ಪ್ರಸನ್ನ, ಸಾಗರ್, ನವೀನ್ ಮೊದಲಾದವರಿದ್ದರು. ಶಿರಂಗಾಲದ ಉಮಾಮಹೇಶ್ವರ ದೇವಾಲಯದ ಅರ್ಚಕ ಸಚಿನ್
ಪೂಜಾ ವಿಧಿಗಳನ್ನು ನಡೆಸಿಕೊಟ್ಟರು.