

ಮಳವಳ್ಳಿ : ಪುರಾತನ ದೇಗುಲಗಳನ್ನು ರಕ್ಷಿಸಿ ಎಂದು ಪೂರಿಗಾಲಿ ಚನ್ನಬಸವ ಒಡೆಯರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬಸವನಬೆಟ್ಟದಲ್ಲಿ ಜೀರ್ಣೋದ್ಧಾರಗೊಂಡ ಹೆಬ್ಬೆಟ್ಟ ಬಸವೇಶ್ವರ ಸ್ವಾಮಿ ದೇವಸ್ಥಾನದ ವಿಮಾನ ಗೋಪುರ ಉದ್ಘಾಟನೆ ಹಿನ್ನೆಲೆಯಲ್ಲಿ ಮಂಗಳವಾರ ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮುಜರಾಯಿ ಇಲಾಖೆಗೆ ಸೇರಿದ ಹೆಬ್ಬೆಟ್ಟ ಬಸವೇಶ್ವರ ದೇವಸ್ಥಾನ ಚೋಳರ ಕಾಲದ್ದು. ಶಿಥಿಲಗೊಂಡಿದ್ದ ದೇಗುಲವನ್ನು ಭಕ್ತ ಶಿವಸ್ವಾಮಿ ನುರಿತ ಶಿಲ್ಪ ಕಲಾವಿದರಿಂದ ಜೀರ್ಣೋದ್ಧಾರ ಗೊಳಿಸಿದ್ದಾರೆ. ಇದರಿಂದ ಶ್ರದ್ಧಾ ಕೇಂದ್ರ ಸೇವೆಗೆ ಸಜ್ಜಾಗಿರುವುದು ಶ್ಲಾಘನೀಯ ಎಂದರು. ಧಾರ್ಮಿಕ ಸಮಾರಂಭಗಳಿಗೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸಂಗಮಿಸಬೇಕು. ನಮ್ಮ ಧರ್ಮ ಮತ್ತು ಸಂಸ್ಕೃತಿ ಉಳಿಸಬೇಕು. ಆ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕುಂದೂರು ಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ದಯಾಶಂಕರ, ಮುಖಂಡರಾದ ಎಚ್.ಬಿ.ಶಿವಸ್ವಾಮಿ, ಮಿಲ್ಟ್ರಿ ಸುರೇಶ, ಮಲ್ಲೇಶ, ರುದ್ರಸ್ವಾಮಿ, ಸುಬ್ರಮಣ್ಯಸ್ವಾಮಿ, ಎವಿಟಿ ಕುಮಾರ, ನಟರಾಜಮೂರ್ತಿ ಇತರರು ಇದ್ದರು.