ಸ್ವಾಮಿ ವಿವೇಕರ ಜೀವನ ಸ್ಫೂರ್ತಿದಾಯಕ

12Manju5-web
ಬೆಳಗಾವಿ ನಗರದ ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವದಿನ ಕಾರ್ಯಕ್ರಮವನ್ನು ಸಂಸದೆ ಮಂಗಲ ಅಂಗಡಿ ಉದ್ಘಾಟಿಸಿದರು. ಪ್ರೊ.ಸಂಜೀವ ಕುಮಾರಮಠ, ಪ್ರೊ.ನಾಗೇಶ್ವರ ದೇಮನಿಕೊಪ್ಪಇತರರು ಇದ್ದರು.
Published on

ಬೆಳಗಾವಿ: ಸ್ವಾಮಿ ವಿವೇಕಾನಂದರ ಜೀವನವೇ ನಮಗೆ ಸ್ಫೂರ್ತಿ ತುಂಬುತ್ತದೆ. ಅವರ ಕನಸು ನನಸು ಮಾಡಲು ಸಿದ್ಧರಾಗಬೇಕು ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು. ನಗರದ ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ ಹಾಗೂ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಯುವ ದಿನ 2024 ಕೇವಲ ಆಚರಣೆಗಿಂತ ಹೆಚ್ಚಿನ ಭರವಸೆ ನೀಡುತ್ತದೆ. ಇದು ಯುವ ಪೀಳಿಗೆಯಲ್ಲಿ ನಂಬಿಕೆಯ ಘೋಷಣೆಯಾಗಿದೆ. ಅವರ ಆಲೋಚನೆಗಳು ಪ್ರವರ್ಧಮಾನಕ್ಕೆ ಬರಲು ವೇದಿಕೆಯಾಗಿದೆ ಎಂದರು. ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರತಿ ವರ್ಷ ಜ. 12ರಂದು ವಿಶ್ವದಾದ್ಯಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಎಲ್ಲರೂ ಸ್ವಾಮಿ ವಿವೇಕಾನಂದರ ಆದರ್ಶ ಅನುಸರಿಬೇಕು ಎಂದರು. ಪ್ರೊ. ಸಂಜೀವ ಕುಮಾರಮಠ, ಪ್ರೊ.ನಾಗೇಶ್ವರ ದೇಮನಿಕೊಪ್ಪ, ಪ್ರೊ.ಸಂತೋಷ ಹಾವರಗಿ, ಮಲ್ಲಯ್ಯ ಕರಡಿ, ಸಂಗೀತ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net