ಸಿರಿಧಾನ್ಯದಲ್ಲಿ ಅರಳಿದ ವಿವೇಕಾನಂದ

Swami Vivekananda 11 Jan 20
Published on

ಹುಬ್ಬಳ್ಳಿ: ವಿಜಯಪುರದಲ್ಲಿ ಜ.12ರಂದು ನಡೆಯಲಿರುವ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲು ಸಿರಿಧಾನ್ಯದಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮೂರ್ತಿಯೊಂದು ಸಜ್ಜಾಗಿದೆ.

ನವನಗರದ ಕೆಎಚ್​ಬಿ ಕಾಲನಿ (ಬಾಲಾಜಿ ನಗರ)ಯ ಕಲಾವಿದ ಶಿವಲಿಂಗಪ್ಪ ಶಿವಬಸಪ್ಪ ಬಡಿಗೇರ ಅವರು ಥರ್ವಕೋಲ್, ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ)ನಿಂದ ಐದು ಅಡಿ ಎತ್ತರದ ಮೂರ್ತಿ ಸಿದ್ಧಪಡಿಸಿದ್ದು, ಅದರ ಮೇಲೆ ಜೋಳ, ನವಣೆ, ಸಜ್ಜೆ, ರಾಗಿ, ಸಾವಿ, ಆರ್ಕ, ಬರಗು ಸೇರಿ ಹಲವು ಸಿರಿಧಾನ್ಯ ಹಾಗೂ ಅಕ್ಕಿ, ಚನ್ನಂಗಿಯನ್ನು ಅಂಟಿಸಿದ್ದಾರೆ. ಶಿಲ್ಪ ಹಾಗೂ ಮರದ ಕೆತ್ತನೆ ಕೆಲಸದಲ್ಲಿ ಪರಿಣತಿ ಪಡೆದಿರುವ ಶಿವಲಿಂಗಪ್ಪ, ಆರು ವರ್ಷಗಳಿಂದ ಪಿಒಪಿ ಹಾಗೂ ಥರ್ವಕೋಲ್, ಸಿರಿಧಾನ್ಯ ಬಳಸಿ ಮೂರ್ತಿ ತಯಾರಿಸುವುದನ್ನು ರೂಢಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net