ವಿವೇಕಾನಂದ ವಿಶ್ವಕಂಡ ಆದರ್ಶ ಗುರು: ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿಕೆ

Swami Vivekananda Jayanti Police Colony Government Senior Primary School mandya
Published on

ಮಂಡ್ಯ: ಭಾರತದ ಆಧ್ಯಾತ್ಮಿಕ ವಿಚಾರಧಾರೆಯನ್ನು ಪ್ರಪಂಚಕ್ಕೆ ಪರಿಚಯಿಸಿದ ಆದರ್ಶ ಗುರು ಸ್ವಾಮಿ ವಿವೇಕಾನಂದರು ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಬಣ್ಣಿಸಿದರು.

ನಗರದ ಪೊಲೀಸ್ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ವಿವೇಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲೂ ಸ್ವಾಮಿ ವಿವೇಕಾನಂದರನ್ನು ನೆನೆಯುತ್ತಿದ್ದೇವೆ ಎಂದರೆ, ಅದಕ್ಕೆ ಕಾರಣ ಅವರ ಆದರ್ಶ ಬದುಕು ಎನ್ನುವುದು ಅರ್ಥವಾಗುತ್ತದೆ. ಇಂದಿಗೂ ಎಂದೆಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರುವಾಗಿ, ಆದರ್ಶ ವ್ಯಕ್ತಿತ್ವದ ಶಕ್ತಿಯಾಗಿ ನಿಲ್ಲುತ್ತಾರೆ. ಪ್ರಪಂಚದ ಪ್ರಮುಖ ಧರ್ಮಗಳ ಪೈಕಿ ಹಿಂದು ಧರ್ಮವು ಶ್ರೇಷ್ಟ ಎಂಬ ಭಾವನೆ ಮೂಡಿಸಿದವರಲ್ಲಿ ಅವರು ಪ್ರಮುಖರಾಗಿದ್ದಾರೆ ಎಂದರು.

ವೇದಿಕೆ ಅಧ್ಯಕ್ಷ ಪೋತೇರ ಮಹದೇವು, ರಾಜ್ಯ ಕಾರ್ಯದರ್ಶಿ ಸುಜಾತಾಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷೆ ಮನುಜಾ, ಮುಖ್ಯಶಿಕ್ಷಕಿ ಜಯಲಕ್ಷ್ಮಮ್ಮ , ಸುರೇಶ್, ಸುಧಾ ಆರಾಧ್ಯ ಇತರರಿದ್ದರು.

ಇದೇ ಸಂದರ್ಭದಲ್ಲಿ ಹಿಂದಿ ಭವನದ ಸಂಸ್ಥಾಪಕ ಕಾರ್ಯದರ್ಶಿ ವಿನಯ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುಸೂಯರಾಣಿ, ವಕೀಲ ತಿರುಮಲಸ್ವಾಮಿ, ಶಿಕ್ಷಕಿ ಸುರೇಖಾ, ಗಾಯಕ ಪ್ರಾಣೇಶ್ ಅವರಿಗೆ ವಿವೇಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net