ಸ್ವಾಮಿ ವಿವೇಕಾನಂದ ವಿಶ್ವಚೇತನ: ಕೃಷಿಕ್ ಲಯನ್ಸ್ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಬಣ್ಣನೆ

Swami Vivekananda Jayanti Krushika Lions Organisation mandya
Published on

ಮಂಡ್ಯ: ವಿಶ್ವಕ್ಕೆ ಸನ್ಮಾರ್ಗ ತೋರಿಸಿಕೊಟ್ಟಿರುವ ವ್ಯಕ್ತಿಗಳು ಹಲವರಿದ್ದಾರೆ. ಅದರಲ್ಲಿ ಸ್ವಾಮಿ ವಿವೇಕಾನಂದರು ಮುಂಚೂಣಿಯಲ್ಲಿ ನಿಲ್ಲುವುದರ ಜತೆಗೆ ವಿಶ್ವಚೇತನ ಎನ್ನಿಸಿಕೊಂಡಿದ್ದಾರೆಂದು ಕೃಷಿಕ ಲಯನ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ನಗರದ ಮಿಮ್ಸ್ ಹೆರಿಗೆ ವಾರ್ಡ್ ಆವರಣದ ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ, ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವ ಹಾಗೂ ವಿವೇಕಾನಂದ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರ ಹುಟ್ಟಿದ ದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಣೆ ಮಾಡಲಾಗುತ್ತದೆ. ಮಹಾತ್ಮ ಗಾಂಧೀಜಿ, ರವೀಂದ್ರನಾಥ್ ಠ್ಯಾಗೋರ್, ಕುವೆಂಪು ಅವರು ಸ್ವಾಮಿ ವಿವೇಕಾನಂದರ ದಿವ್ಯವಾಣಿಯಿಂದ ಪ್ರಭಾವಿತರಾಗಿ ವಿಶ್ವಚೇತನರಾಗಿದ್ದಾರೆ. ಸ್ವಾಮಿ ವಿವೇಕಾನಂದರು ಬದುಕಿದ್ದು 39 ವರ್ಷ ಮಾತ್ರ. ಅಷ್ಟರಲ್ಲಿ ಎರಡು ಬಾರಿ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿದ್ದರು. ಹೊರ ದೇಶಗಳಲ್ಲೂ ಹಿಂದು ಧರ್ಮದ ಶ್ರೇಷ್ಟತೆಯ ಸಂದೇಶಗಳನ್ನು ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಸದೃಢ ಮನಸ್ಸು ಹಾಗೂ ಆರೋಗ್ಯದಿಂದ ಇದ್ದ ಸ್ವಾಮಿ ವಿವೇಕಾನಂದರು ಬದುಕಿದ್ದು ಕೆಲವೇ ವರ್ಷಗಳಾದರೂ ಪ್ರಪಂಚಕ್ಕೆ ಭಾರತದ ಹಿಂದು ಧರ್ಮದ ಸಾರ್ವಭೌಮ ಸಾರಿದ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.

ಮಿಮ್ಸ್ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಚ.ಮ.ಉಮೇಶ್‌ಬಾಬು ಇದ್ದರು. ಇದೇ ವೇಳೆ ಮಿಮ್ಸ್ ಇಸಿಜಿ ವಿಭಾಗದ ತಾಂತ್ರಿಕ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಲ್ಲೇಶ್ ಅವರಿಗೆ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net