

ಬೀಳಗಿ: ಸ್ಥಳೀಯ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್‌ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಮಾರಿ ಪ್ರಗತಿ ಗೋಕಾಕ, ಕುಮಾರಿ ಗಾಯತ್ರಿ ಜೋಷಿ ಮತ್ತು ಕುಮಾರಿ ಐಶ್ವರ್ಯ ಸಾಲಪೂರ ಹಾಗೂ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಸಮರ್ಥ ಬೋರ್ಜಿ ಮತ್ತು ಅಥರ್ವ ನಿಂಬ್ಳಾಕರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷ ಎಂ.ಎನ್.ಪಾಟೀಲ, ಶೈಕ್ಷಣಿಕ ನಿರ್ದೇಶಕ ಡಿ.ಎಸ್.ಕುಂಠೆ, ಆಡಳಿತಾಧಿಕಾರಿ ಶಂಕರಗೌಡ ಆರ್. ಪಾಟೀಲ ಮತ್ತು ಆಡಳಿತ ಮಂಡಳಿ, ಪ್ರಾಚಾರ್ಯ ಜಿ.ಆರ್.ಪಾಟೀಲ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.