

ಹುಬ್ಬಳ್ಳಿ: ಇಲ್ಲಿಯ ಎಸ್ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ಎಸ್ಎಸ್ ಘಟಕ ಮತ್ತು ವಿವೇಕ್ ಜಾಗೃತಿ ಬಳಗ-ದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಫಿಜಿಸಿಯನ್ ಡಾ. ಪಂಕಜಾ ಬ್ಯಾಕೋಡಿ ಉಪನ್ಯಾಸ ನೀಡಿದರು. ವಿದ್ಯಾಥಿರ್ಗಳಿಗೆ ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿಯ ಸಂದೇಶಗಳು ಯುವಕರ ಪಾಲಿನ ಸ್ಫೂತಿರ್ಯ ಚಿಲುಮೆ. ಸ್ವಾಮಿ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಅವರನ್ನು ಯುವಜನರ ಆದರ್ಶ ಎಂದು ಗುರುತಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸಿಸಿಲಿಯಾ ಡಿಕ್ರೂಜ್ ಮಾತನಾಡಿ, ಯುವ ದಿನಾಚರಣೆ ಮೂಲಕ ರಾಷ್ಟ್ರದ ಯುವಕರನ್ನು ಪ್ರೇರೇಪಿಸುವ ಮತ್ತು ಸಬಲೀಕರಣಗೊಳಿಸುವ ಪ್ರಯತ್ನವಾಗಿದೆ ಎಂದರು.
ಡಾ. ಬಿ.ಎಸ್. ಮಾಳವಾಡ, ಡಾ. ಗುರುರಾಜ ನವಲಗುಂದ, ಡಾ. ರಘು ಅಕಮಂಚಿ, ಅಣ್ಣಪ್ಪ ಕೊರವರ, ಶಿವಕುಮಾರ ಪ್ರಬಯ್ಯನವರಮಠ, ಲಕ್ಷ್ಮಣ ಹೊಸಮನಿ, ವಿದ್ಯಾ ಡಂಬಳ, ಗಾಯತ್ರಿ ರಡ್ಡೇರ್, ನಿಶ್ಚಿತಾ ಚಿಂಚಲಿ, ಉಪಸ್ಥಿತರಿದ್ದರು.
ಸಂಗೀತ ವಿಭಾಗದ ವಿದ್ಯಾಥಿರ್ನಿಯರು ಪ್ರಾರ್ಥನೆ ಹೇಳಿದರು, ಡಾ. ತಾಯಣ್ಣ ಎಚ್. ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಪ್ರೊ. ಶಿವಕುಮಾರ ಬನ್ನಿಹಟ್ಟಿ ಪರಿಚಯಿಸಿದರು.
ಗಾಯತ್ರಿ ಜಾಧವ ನಿರೂಪಿಸಿದರು, ಅನು ಲಗಮಣ್ಣವರ ಭಾಷಣ ಮಾಡಿದರು. ಡಾ. ಮಹದೇವ ಹರಿಜನ ವಂದಿಸಿದರು.