

ಹುಬ್ಬಳ್ಳಿ : ಇಲ್ಲಿಯ ಸಂತೋಷ ನಗರದಲ್ಲಿರುವ ಶಕ್ತಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನ ಮಹೋತ್ಸವವನ್ನು ಆ. 20 ರಿಂದ 22 ರವರಿಗೆ ಆಯೋಜಿಸಲಾಗಿದೆ.
ಆ. 19ರಂದು ಬೆಳಗ್ಗೆ 8 ಗಂಟೆಗೆ ಋಗ್ವೇದಿಗಳಿಗೆ ನಿತ್ಯ ಉಪಕರ್ಮ, 10 ಕ್ಕೆ ಸತ್ಯನಾರಾಯಣ ಪೂಜೆ, ಸಂಜೆ 7.30 ಕ್ಕೆ ಗೋಪೂಜೆ, ಸಂಗೀತ ಸೇವೆ ಹಾಗೂ ಪಲ್ಲಕ್ಕಿ ಸೇವೆ ನಡೆಯಲಿದೆ.
20 ರಂದು ಪೂರ್ವರಾಧನೆ, 21 ರಂದು ಮಧ್ಯಾರಾಧನೆ, 22 ರಂದು ಮಧ್ಯಾರಾಧನೆ ಹಾಗೂ ಪ್ರತಿ ದಿನ ಸಂಜೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಿತ್ಯ ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಫಲ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಕನಕಾಭಿಷೇಕ, ಬ್ರಾಹ್ಮಣ ಅಲಂಕಾರ ಪೂಜೆ, ಮಧ್ಯಾಹ್ನ ನೈವೇದ್ಯ ಹಸೊ್ತೕದಕ, ಸಾರ್ವಜನಕರಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಧರ್ಮದರ್ಶಿ ಗೋವಿಂದ ಆಚಾರ್ ತಿಳಿಸಿದ್ದಾರೆ.