ಮನೆ ಬಾಗಿಲಿಗೆ ಶಬರಿಮಲೆಯ ಸ್ವಾಮಿ ಪ್ರಸಾದ

Ayyappa
Published on

ಬೆಂಗಳೂರು:  ಅಂಚೆ ಇಲಾಖೆ ಮನೆ ಬಾಗಿಲಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದವನ್ನು ತಲುಪಿಸುವ ವ್ಯವಸ್ಥೆ ಮಾಡಿದೆ.

ಕೋವಿಡ್ -19ರ ಹಿನ್ನೆಲೆಯಲ್ಲಿ  ಶಬರಿಮಲೆಯಲ್ಲಿ ದರ್ಶನಕ್ಕೆ ಸೀಮಿತ ಅವಕಾಶವಿರುವ ಹಿನ್ನೆಲೆಯಲ್ಲಿ ಸ್ವಾಮಿ ಅಯ್ಯಪ್ಪ ಪ್ರಸಾದ ಅರವಣ, ತುಪ್ಪ, ಗಂಧದ ಪೇಸ್ಟ್, ವಿಭೂತಿ, ಹರಿಶಿಣ, ಕುಂಕುಮ ಪ್ರಸಾದವನ್ನು ಸ್ವೀಡ್ ಪೋಸ್ಟ್ ಮೂಲಕ  ತರಿಸಿಕೊಳ್ಳಬಹುದಾಗಿದೆ. ಯಾವುದೇ ಅಂಚೆ ಕಚೇರಿಯಲ್ಲಿ 450 ರೂಪಾಯಿ ಪಾವತಿಸಬಹುದಾಗಿದೆ. ಅಲ್ಲದೆ, ಯಾವುದೇ ಪ್ರದೇಶದಿಂದ ಪ್ರಸಾದವನ್ನು ಪಡೆಯಬಹುದಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net