ಶ್ವಕರ್ಮರ ಸೃಜನಶೀಲತೆ ಅನುಕರಣೀಯ

Swakarma's creativity is exemplary
ಮನಗೂಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಸಂಗಮೇಶ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ : ದೇವಶಿಲ್ಪಿ ವಿಶ್ವಕರ್ಮರವರು ಸೃಜನಶೀಲತೆಯ ಹರಿಕಾರರಾಗಿದ್ದರು. ಅಂದಿನ ಕಾಲದಲ್ಲಿ ದೇವಾಲಯ, ದೇವತೆಗಳ ರಥ, ಆಯುಧ, ಇಂದ್ರಪುರಿ, ದ್ವಾರಕಾ, ಹಸ್ತಿನಾಪುರ, ಸ್ವರ್ಗಲೋಕ, ಲಂಕಾ ಸೇರಿ ಮತ್ತಿತರರ ನಗರಗಳು ನಿರ್ಮಿಸಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ಮುಖ್ಯ ಗುರು ಸಂಗಮೇಶ ಬಿರಾದಾರ ಹೇಳಿದರು.

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕನಕ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಾವೆಲ್ಲ ವಿಶ್ವಕರ್ಮರ ಸೃಜನಶೀಲತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಅಂದಾಗಲೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು. ವಿದ್ಯಾರ್ಥಿನಿ ಐಶ್ವರ್ಯ, ಮಾಯಕ್ಕಾ ತಂಡದವರು ಪ್ರಾರ್ಥಿಸಿದರು. ಸ್ಪಂದನಾ ಅಭಂಗೆ ನಿರೂಪಿಸಿದರು. ಕೌಶಿಕ ಅತಾಲಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net