ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳಿಂದ ಸ್ವದೇಶಿ ಸಂಕಲ್ಪ

swadeshi
Published on

ಬೆಂಗಳೂರು: ಭಾರತ-ಪಾಕ್​ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನ ಪರವಾಗಿ ನಿಂತು ಸೇನಾ ನೆರವು ನೀಡಿದ್ದ ಟರ್ಕಿ ವಿರುದ್ಧ ವ್ಯಾಪಾರವನ್ನು ಬಹಿಷ್ಕರಿಸಿರುವ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘ, ಇದೀಗ ಸ್ವದೇಶಿ ಸಂಕಲ್ಪ ಕೈಗೊಂಡಿದೆ.

ವಿದೇಶಿ ಉತ್ಪನ್ನ ಬಹಿಷ್ಕರಿಸಿ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವುದು, ವಿವಾಹ ಮತ್ತು ಶಿಕ್ಷಣ ಭಾರತದಲ್ಲೇ ನಡೆಸುವುದು, ಸ್ಥಳಿಯ ರೈತರಿಗೆ, ಕಸೂತರರಿಗೆ ಬೆಂಬಲ ನೀಡುವುದು, ಭಾರತೀಯ ತಂತ್ರಜ್ಞಾನ ಅಳವಡಿಸಿಕೊಳ್ಳುವುದೂ ಸೇರಿ 20 ಅಂಶಗಳ ಸ್ವದೇಶಿ ಸಂಕಲ್ಪ ಕೈಗೊಳ್ಳುವ ಬಗ್ಗೆ ರಾಷ್ಟ್ರೀಯ ವ್ಯಾಪಾರಿ ಕಲ್ಯಾಣ ಮಂಡಳಿ ನಿರ್ಧರಿಸಿದೆ. ಇದಕ್ಕೆ ಬೆಂಗಳೂರು ಸಂಘ ಬೆಂಬಲ ವ್ಯಕ್ತಪಡಿಸಿದೆ.

ಸಂಘದ ಅಧ್ಯಕ್ಷ ಪ್ರಕಾಶ್​ ಪಿರಗಲ್​ ಮಾತನಾಡಿ, ದೆಹಲಿಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಸ್ವದೇಶಿ ಮಂತ್ರ ಬಗ್ಗೆ ಚರ್ಚಿಸಲಾಯಿತು. ವಿದೇಶಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಿರುವುದು ಮತ್ತು ರಫ್ತು ಮಾಡದಂತೆ ನಿರ್ಧರಿಸಿದ್ದೇವೆ. ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಿ ರೈತರಿ, ಕಸೂತರರನ್ನು ಸಬಲೀಕರಣ ಮಾಡಲಾಗುವುದು. ಬೆಂಗಳೂರಿನ ವ್ಯಾಪಾರಿಗಳಿಂದ ಶ್ರೀಘ್ರದಲ್ಲೇ ಸ್ವದೇಶಿ ಪ್ರತಿಜ್ಞೆ ಮಾಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net