ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ

30ard01
ಔರಾದ್ ತಾಲೂಕಿನ ಸಂತಪುರ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಚ್ಛತಾ ಹೀ ಸೇವೆ ಕಾರ್ಯಕ್ರಮದಲ್ಲಿ ಮುಖ್ಯಗುರು ಅಜಯಕುಮಾರ ದುಬೆ, ಚಿನ್ನಮ್ಮ ದೊಡ್ಡಮನಿ, ಶಿವಲಿಂಗ ಹೇಡೆ, ಶಿವಾಜಿ ಚಿಟಗೀರೆ, ಸಂತೋಷ ಮುಕ್ರಂಬೆ, ಚಂದ್ರಕಾಂತ ಕೋಳಿ, ಬಾಲಿಕಾ, ಕಲ್ಪನಾ ಪಾಟೀಲ್ ಇತರರಿದ್ದರು.
Published on

ಔರಾದ್: ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದಲ್ಲಿ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಸಾಧ್ಯವೆಂದು ಸಂತಪುರ ಮಹಿಳಾ ಚೈತನ್ಯ ಯುವತಿ ಸಂಘದ ಅಧ್ಯಕ್ಷೆ ಚಿನ್ನಮ್ಮ ದೊಡ್ಡಮನಿ ಹೇಳಿದರು.

ಸಂತಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನೆಹರು ಯುವ ಕೇಂದ್ರ ಬೀದರ್, ಸಂತಪುರ ಮಹಿಳಾ ಚೈತನ್ಯ ಯುವತಿ ಸಂಘದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಚ್ಛತಾ ಹೀ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ನಮ್ಮ ಮನೆಯಿಂದಲೇ ಪ್ರಾರಂಭವಾದ ಸುಂದರ ಸಮಾಜ ನಿರ್ಮಿಸಲು ಸಾಧ್ಯ. ದೇಶದ ಪ್ರಧಾನಿಯವರಂತೆ ಎಲ್ಲರೂ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದಾಗ ರೋಗ ಮುಕ್ತಿ ಹೊಂದಲು ಸಾಧ್ಯವೆಂದು ಹೇಳಿದರು.

ಶಾಲೆಯ ಮಕ್ಕಳು ಮತ್ತು ಸಿಬ್ದಂದಿ ಜತೆಗೂಡಿ ಶಾಲಾ ಆವರಣ ಸ್ವಚ್ಛಗೊಳಿಸಲಾಯಿತು. ಮುಖ್ಯಗುರು ಅಜಯಕುಮಾರ ದುಬೆ, ಚಿನ್ನಮ್ಮ ದೊಡ್ಡಮನಿ, ಶಿವಲಿಂಗ ಹೇಡೆ, ಶಿವಾಜಿ ಚಿಟಗೀರೆ, ಸಂತೋಷ ಮುಕ್ರಂಬೆ, ಚಂದ್ರಕಾಂತ ಕೋಳಿ, ಬಾಲಿಕಾ, ಕಲ್ಪನಾ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net