ಸ್ವಚ್ಛತಾ ಅಭಿಯಾನ ನಮೋ ಕೂಸು

HLK SWACHATHE 20
Published on

ಹೊಳಲ್ಕೆರೆ: ಸ್ವಚ್ಛತಾ ಅಭಿಯಾನ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು. ಈ ಮೂಲಕ ಸ್ವಚ್ಛ ಭಾರತ ನಿರ್ಮಾಣಕ್ಕೆ ತೊಟ್ಟ ಅವರ ಆಶಯ ಈಡೇರಿಕೆಗೆ ಸರ್ವರ ಸಹಕಾರ ಅಗತ್ಯ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಪುರಸಭೆ ವತಿಯಿಂದ ಪಟ್ಟಣದಲ್ಲಿ ಈಚೆಗೆ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಚ್ಛತೆ ಎಂಬುದು ಪೌರಕಾರ್ಮಿಕರ ಕೆಲಸವೆಂಬ ಭಾವನೆ ಸರಿಯಲ್ಲ. ಪ್ರತಿ ನಾಗರಿಕರ ಹೊಣೆ ಕೂಡ ಆಗಿದೆ. ತಮ್ಮ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಬೇಕು. ಜತೆಗೆ ಸಸಿ ನೆಟ್ಟು ಪೋಷಣೆಗೆ ಆದ್ಯತೆ ನೀಡಬೇಕು ಎಂದರು.

ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಕೂಡ ಸ್ವಚ್ಛತಾ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಮೂಲಕ ಆರೋಗ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಪೌರಕಾರ್ಮಿಕರಿಗೆ ವೇತನ ಕಡಿಮೆ ಇರಬಹುದು. ಆದರೆ, ಜವಾಬ್ದಾರಿ ದೊಡ್ಡದು. ನಿಮ್ಮಗಳ ಪಾದವನ್ನೇ ಪ್ರಧಾನಿ ತೊಳೆದು ವಿಶ್ವಕ್ಕೆ ನಿಮ್ಮ ಪ್ರಾಮುಖ್ಯತೆ ಕುರಿತು ಸಂದೇಶ ರವಾನಿಸಿದ್ದಾರೆ ಎಂದರು.

ತಹಸೀಲ್ದಾರ್ ಬೀಬಿ ಫಾತಿಮಾ, ಆಯುಕ್ತ ವಾಸಿಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net