

ಕಾರ್ಕಳ: ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ ಮತ್ತು ವಕೀಲರ ಸಂಘ ಕಾರ್ಕಳ ಆಶ್ರಯದಲ್ಲಿ ಸ್ವಚ್ಛ-ಹಿ-ಸೇವಾ ಅಭಿಯಾನ 2024 ಕಾರ್ಯಕ್ರಮ ಕಾರ್ಕಳ ನ್ಯಾಯಲಯದ ಆವರಣದಲ್ಲಿ ಜರುಗಿತು. ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಂ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಶರ್ಮಿಳಾ ಸಿ.ಎಸ್. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಕೋಮಲ ಆರ್.ಸಿ., ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಅಬುತಾಹಿರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ ಹಾಗೂ ವಕೀಲರು, ನ್ಯಾಯಲಯದ ಸಿಬ್ಬಂದಿ ಉಪಸ್ಥಿತರಿದ್ದರು.