ತುಮಕೂರು ಜಿಲ್ಲೆಯಲ್ಲಿ ಸ್ವಚ್ಛೋತ್ಸವ ನಿತ್ಯೋತ್ಸವ ; ಅ.2ರಿಂದ 31ರವರೆಗೆ ಜಿಲ್ಲಾ ಪಂಚಾಯಿತಿಯಿಂದ ಮಾಸಾಚರಣೆ

IMG-20200926-WA0008
Published on

ತುಮಕೂರು: ಮಹಾತ್ಮಗಾಂಧಿ 150ನೇ ಜಯಂತಿ ಸವಾರೋಪದ ಗೌರವ ಸೂಚಕವಾಗಿ ಪ್ರತೀ ಗ್ರಾಮವನ್ನು ಸ್ವಚ್ಛ, ಸುಂದರ, ಹಾಗೂ ತ್ಯಾಜ್ಯಮುಕ್ತವಾಗಿಸುವ ಉದ್ದೇಶದಿಂದ ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆಯನ್ನು ಅ.2ರಿಂದ 31ರವರೆಗೆ ಜಿಪಂ ಹಮ್ಮಿಕೊಂಡಿದೆ.

ಮಾಸಾಚರಣೆ ಪ್ರಯುಕ್ತ ಗ್ರಾಪಂ ಸ್ವಚ್ಛ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಗ್ರಾಪಂಗಳಲ್ಲಿ ನಿರ್ಮಿಸಲಾಗುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸ್ವಚ್ಛ ಸಂಕೀರ್ಣ ವಿನ್ಯಾಸಗೊಳಿಸಲಾಗುವುದು. ಸ್ವಚ್ಛ ಸಂಕೀರ್ಣ ಏಕರೂಪದ ಬಣ್ಣ, ಚಿಹ್ನೆ, ಸಂದೇಶ ಮತ್ತು ವಿನ್ಯಾಸ ಒಳಗೊಂಡಿರುತ್ತದೆ.

ತ್ಯಾಜ್ಯ, ಜೈವಿಕ, ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಮೀಸಲಾದ ಪ್ರದೇಶಗಳೊಂದಿಗೆ ಸ್ವಯಂ ಸುಸ್ಥಿರ ವ್ಯವಸ್ಥೆಯನ್ನೊಳಗೊಂಡ ಪರಿಸರ ಉದ್ಯಾನವನದ ಅನುಭವ ನೀಡುವ ಹಿನ್ನೆಲೆಯಲ್ಲಿ ಎಲ್ಲ ಗ್ರಾಪಂಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಜಿಲ್ಲೆಯ 330 ಗ್ರಾಪಂಗಳ ಪೈಕಿ 145ರಲ್ಲಿ ತ್ಯಾಜ್ಯ ನಿರ್ವಹಣಾ ಟಕಕ್ಕೆ ರಾಜ್ಯ ಕಚೇರಿಯು ವಿಸ್ತ್ಪ್ರತ ಯೋಜನಾ ವರದಿ (ಡಿಪಿಆರ್) ಅನುಮೋದನೆ ನೀಡಿದೆ. ತಿಪಟೂರು ತಾಲೂಕಿನ ಬಿಳಿಗೆರೆ, ಮಧುಗಿರಿ ಹೊಸಕೆರೆ ಹಾಗೂ ಕೊರಟಗೆರೆ ಹೊಳವನಹಳ್ಳಿಯಲ್ಲಿ ತ್ಯಾಜ್ಯ ನಿರ್ವಹಣಾ ಟಕವನ್ನು ನಿರ್ಮಿಸಲಾಗಿದೆಯಾದರೂ ಅದು ಇನ್ನೂ ಕಾರ್ಯನಿರ್ವಹಿಸಿಲ್ಲ.

ಬಿಳಿಗೆರೆಯಲ್ಲಿ ಬ್ರ್ತ್ಯಾಂಡಿಂಗ್ ಲೋಕಾರ್ಪಣೆ: ನತ್ಯಾಜ್ಯ ನಿರ್ವಹಣಾ ಟಕ ಆರಂಭಗೊಂಡಿರುವ ಬಿಳಿಗೆರೆ ಗ್ರಾಪಂನಲ್ಲಿ ಅ.2ರಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತ್ಯಾಜ್ಯ ನಿರ್ವಹಣಾ ಟಕಗಳ ಏಕರೂಪದ ಬ್ರ್ತ್ಯಾಂಡಿಂಗ್‌ನ ಲೋಕಾರ್ಪಣೆ ಹಾಗೂ ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆಗೆ ವಿದ್ಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾದ್ಯಂತ ಏಕರೂಪದಲ್ಲಿ ಟಕ ನಿರ್ಮಾಣವಾಗಲಿದೆ.

ಅ.15ರಂದು ವಿಶ್ವ ಕೈತೊಳೆಯುವ ದಿನ: ಮಾಸಾಚರಣೆ ನಿಮಿತ್ತ ಅ.15ರಂದು ವಿಶ್ವ ಕೈತೊಳೆಯುವ ದಿನಾಚರಣೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸಲು ಮಧುಗಿರಿ ತಾಲೂಕಿನ ಹೊಸಕೆರೆ ಹಾಗೂ ಕೊರಟಗೆರೆ ಹೊಳವನಹಳ್ಳಿಯಲ್ಲಿ ಏಕರೂಪದ ಬ್ರ್ತ್ಯಾಂಡಿಂಗ್, ಗಿಡ ನೆಡುವ, ಶ್ರಮದಾನ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಸಾಚರಣೆಯಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡನೆ, ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಸಲುವಾಗಿ ಚರಂಡಿ, ಬೀದಿ,ಶಾಲೆ, ಅಂಗನವಾಡಿ ಶುಚಿಗೊಳಿಸುವ, ಪ್ರೌಢಶಾಲಾ ಮಕ್ಕಳಿಗೆ ಆನ್‌ಲೈನ್ ಮೂಲಕ ಪ್ರಬಂಧ ಸ್ಪರ್ಧೆ, ಕಿರುಚಿತ್ರಗಳ ಪ್ರದರ್ಶನ, ತ್ಯಾಜ್ಯ ಮತ್ತು ಶೌಚಗೃಹಗಳ ಬಳಕೆ ಕುರಿತು ಮನೆ ಮನೆ ಭೇಟಿ, ತಿಪ್ಪೆಗುಂಡಿ ನಿರ್ವಹಣೆ, ಹೊಲದಲ್ಲಿನ ಹಸಿ ಕಸವನ್ನು ಗೊಬ್ಬರವನ್ನಾಗಿಸುವ ಬಗ್ಗೆ ಜಾಗೃತಿ ಹಮ್ಮಿಕೊಳ್ಳಲಾಗುವುದು.

ಸ್ವಚ್ಛೋತ್ಸವ ನಿತ್ಯೋತ್ಸವ ವಾಸಾಚರಣೆಯ ಎಲ್ಲ ಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಿದ್ದು, ಆಯಾ ಗ್ರಾಪಂ ಜತೆ ಸಹಕಾರ ನೀಡಿ ವಾಸಾಚರಣೆ ಯಶಸ್ವಿಗೊಳಿಸಬೇಕು. ಶುಭಾಕಲ್ಯಾಣ್ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net