‘ಸ್ವಾಭಿಮಾನಿಗೆ ಗಾನ ನಮನ’ ಕಾರ್ಯಕ್ರಮ

11
Published on

ಮೈಸೂರು: ಮಾಜಿ ಸಂಸದ ದಿ. ವಿ.ಶ್ರೀನಿವಾಸ ಪ್ರಸಾದ್ ಸ್ಮರಣಾರ್ಥ ಚಾಮರಾಜನಗರದ ರಂಗವಾಹಿನಿ ಸಂಸ್ಥೆ, ಮೈಸೂರಿನ ಸಮಾನ ಮನಸ್ಕ ಗೆಳೆಯರ ಬಳಗ ವತಿಯಿಂದ ಭಾನುವಾರ ‘ಸ್ವಾಭಿಮಾನಿಗೆ ಗಾನ ನಮನ’ ಕಾರ್ಯಕ್ರಮ ನೆರವೇರಿತು.

ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರಲ್ಲಿ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಗಾಯಕರು ವಿ.ಶ್ರೀನಿವಾಸಪ್ರಸಾದ್ ಅವರು ಇಷ್ಟಪಡುತ್ತಿದ್ದ ಮತ್ತು ಅವರ ವ್ಯಕ್ತಿತ್ವಕ್ಕೆ ಹೊಂದುವಂತಹ ಹಾಡುಗಳನ್ನು ಪ್ರಸ್ತುತಪಡಿಸುವ ಮೂಲಕ ‘ಸ್ವಾಭಿಮಾನಿ’ಗೆ ಗಾನ ನಮನ ಸಲ್ಲಿಸಿದರು.

ಗಾಯಕರಾದ ಸಿ.ಎಂ.ನರಸಿಂಹಮೂರ್ತಿ, ದೇವಾನಂದ ವರಪ್ರಸಾದ್, ಹುರಗಲವಾಡಿ ರಾಮಯ್ಯ, ಅಮ್ಮ ರಾಮಚಂದ್ರ, ಲಕ್ಷ್ಮೀರಾಮ್, ಮಹಾಲಿಂಗ ಗಿರ್ಗಿ, ಮುಳ್ಳೂರು ಕೃಷ್ಣ, ರಾಜೇಂದ್ರ ಪ್ರಸಾದ್, ಸಿಂಚನಾ, ರಶ್ಮಿ ಸೇರಿದಂತೆ ಇತರರ ಗಾಯಕರು ಗಾಯನ ಪ್ರಸ್ತುತ ಪಡಿಸಿದರು.

ಇವರಿಗೆ ಪುರುಷೋತ್ತಮ ಕಿರಗಸೂರು(ಕೀ ಬೋರ್ಡ್), ಸಿ.ಮಹದೇವ(ತಬಲಾ), ಅರುಣ(ರಿದಂ ಪ್ಯಾಡ್), ಕಿರಣ್(ಡೋಲಕ್) ಸಾಥ್ ನೀಡಿದರು.
ಇದಕ್ಕೂ ಮುನ್ನ ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನೇರ-ನಿಷ್ಠುರ ನಡೆ-ನುಡಿಯ ವ್ಯಕ್ತಿತ್ವ ಉಳ್ಳವರಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ಶೋಷಿತ ವರ್ಗಗಳ ಧ್ವನಿಯಾಗಿದ್ದರು. ಸ್ವಾಭಿಮಾನಿ ಎಂದೇ ಹೆಸರಾಗಿದ್ದರು. ಹೋರಾಟ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದು ಬಹುದೊಡ್ಡ ನಾಯಕರಾಗಿ ಬೆಳೆದಿದ್ದರು ಎಂದರು.

ಶ್ರೀನಿವಾಸ ಪ್ರಸಾದ್ ಭಾವಚಿತ್ರಕ್ಕೆ ಅವರ ಪತ್ನಿ ಭಾಗ್ಯಲಕ್ಷ್ಮೀ ಪುಷ್ಪಾರ್ಚನೆ ನೆರವೇರಿಸಿದರು. ಮೈಸೂರು ವಿಶ್ವವಿದ್ಯಾಲಯ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್, ರಂಗವಾಹಿನಿ ಅಧ್ಯಕ್ಷ ಕೆ.ಎಂ.ನರಸಿಂಹಮೂರ್ತಿ, ಮುಖಂಡರಾದ ಸಿ.ಹರಕುಮಾರ್, ಎನ್.ಶಂಕರ್, ಬದನಾಳು ಬಸವಣ್ಣ, ಸೋಮಯ್ಯ ಮಲೆಯೂರು, ಕೆ.ಆರ್.ಗೋಪಾಲಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net