ಹೂವನೂರಿನಲ್ಲಿ ಆಯೋಜನೆ 13, 14 ರಂದು ಸ್ವಾಭಿಮಾನಿ ಶರಣ ಮೇಳ

Swabhimani Sharan Mela is planned on 13th and 14th at Hoovanur
ಬಾಗಲಕೋಟೆ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿಯ ಅಧ್ಯಕ್ಷ, ಬಸವಗಂಗೋತ್ರಿಯ ಚನ್ನ ಬಸವೇಶ್ವರ ಜ್ಞಾನ ಪೀಠಾಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಭುಲಿಂಗ ಸ್ವಾಮೀಜಿ, ಸತ್ಯಾದೇವಿ ಮಾತಾಜಿ, ಅಕ್ಕನಾಗಾಲಾಂಬಿಕೆ ಮಾತಾಜಿ, ಚಂದ್ರಕಾಂತ ಲುಕ್, ಅಶೋಕ ಬೆಂಡಿಗೇರಿ ಇದ್ದರು.
Published on

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಹೂವನೂರಿನಲ್ಲಿ ಜ.13 ಮತ್ತು 14 ರಂದು ಸ್ವಾಭಿಮಾನಿ ಶರಣ ಮೇಳ ಆಯೋಜಿಸಲಾಗಿದೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ, ಬಸವಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನ ಪೀಠಾಧ್ಯಕ್ಷ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.13 ರಂದು ಬೆಳಗ್ಗೆ 10.30 ಕ್ಕೆ ಸ್ವಾಭಿಮಾನಿ ಶರಣ ಮೇಳವನ್ನು ಚಿಕ್ಕಮಗಳೂರಿನ ಡಾ.ಬಸವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಅಂದು ಬೆಳಗ್ಗೆ 6 ಗಂಟೆಗೆ ಕೊಪ್ಪಳ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ವೀರಣ್ಣ ಲಿಂಗಾಯತ ಅಧ್ಯಕ್ಷತೆ ವಹಿಸುವರು. ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಬಸವ ಚಿಂತನ ಪ್ರಭೆ ನಡೆಯಲಿದೆ ಎಂದು ತಿಳಿಸಿದರು.

ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಬಸವ ಧ್ವಜಾರೋಹಣ ಮಾಡುವರು. ಸ್ವಾಭಿಮಾನಿ ಶರಣ ಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಚಿಕ್ಕಮಗಳೂರಿನ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸುವರು. ಬೀದರ್ ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ, ಬೆಳಗಾವಿಯ ಪ್ರವಚನಕಾರ ಸದ್ಗುರು ಮಾತೆ ಅಕ್ಕನಾಗಲಾಂಬಿಕೆ ಮಾತಾಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಅಂದು ಸಂಜೆ ರಾಷ್ಟ್ರೀಯ ಬಸವದಳದ ಯುವ ಗೋಷ್ಠಿ ನಡೆಯಲಿದೆ. ಲಿಂಗಾಯತ ಸಮನ್ವಯ ಸಮಿತಿ ರಾಜ್ಯಸಂಚಾಲಕ ಶ್ರೀಕಾಂತ ಸ್ವಾಮಿ ಹಾಗೂ ಸಾಹಿತಿ ಸಚ್ಚಿದಾನಂದ ಚಟ್ನಳ್ಳಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಯುವ ಗೋಷ್ಠಿ ರಾಷ್ಟ್ರೀಯ ಬಸವ ದಳದ ಮುಖಂಡ ಸಂಜಯ ಪಾಟೀಲ ಉದ್ಘಾಟಿಸಲಿದ್ದಾರೆ. ತೆಲಂಗಾಣ ಯುವ ರಾ.ಬ.ದಳದ ಅಧ್ಯಕ್ಷ ಮಧು ಇಟಗ್ಯಾಳ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ಶ್ರೀಶೈಲ ತುಂಗಳದ ಹಾಗೂ ಸದಾಶಿವ ಎಚ್. ವಿಷಯ ಮಂಡನೆ ಮಾಡುವರು ಎಂದು ಹೇಳಿದರು.

ಜ.14 ರಂದು ಲಿಂಗಾಯತ ಧರ್ಮ ಸಂಸ್ಥಾಪನಾ ದಿನದಂದು ಸಮುದಾಯ ಪ್ರಾರ್ಥನೆ, ವಚನ ಪಠಣ ನಡೆಯಲಿದೆ. ಕಲ್ಯಾಣ ಹೆಬ್ಬಾಳದ ಬಸವ ಚೇತನ ದೇವರು, ಶಾಂತಾದೇವಿ ಮಾತಾಜಿ, ಮಲಕನಕೊಪ್ಪ ಸಾನ್ನಿಧ್ಯ ವಹಿಸಲಿದ್ದಾರೆ. ಯುವ ನಾಯಕ ರಾಹುಲ್ ಜಾರಕಿಹೊಳಿ ಅತಿಥಿಗಳಾಗಿ ಆಗಮಿಸಲಿದ್ದು, ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಧರ್ಮ ಪತ್ನಿ ಕಮಲಮ್ಮ ನಿರಾಣಿ ಬಸವ ಧ್ವಜಾರೋಹಣ ಮಾಡಲಿದ್ದಾರೆ. ಬೆಳಗಾವಿ ರಾ.ಬ.ದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಕೆಎಎಸ್ ಅಧಿಕಾರಿ ಎಸ್.ದಿವಾಕರ ಹಾಗೂ ಇಂದುಮತಿ ಪಾಟೀಲ ಅನುಭಾವ ಚಿಂತನ ಮಾಡಲಿದ್ದಾರೆ ಎಂದು ತಿಳಿಸಿದರು.

ಅಂದು ಸಂಜೆ 5 ಗಂಟೆಗೆ ಲಿಂಗಾಯತ ಧರ್ಮ ಮಾನ್ಯತೆಗಾಗಿ ಮರು ಪ್ರಸ್ತಾವನೆ ಕುರಿತು ಜನ ಜಾಗೃತಿ ಚಿಂತನಗೋಷ್ಠಿ ನಡೆಯಲಿದೆ. ಮಂಡ್ಯ ಜಿಲ್ಲೆಯ ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ ಉದ್ಘಾಟಿಸಲಿದ್ದಾರೆ. ಬೀದರ್ ರಾ.ಬ.ದಳದ ಅಧ್ಯಕ್ಷ ಡಾ.ಮಹೇಶ ಬಿರಾದಾರ ಧ್ವಜಾರೋಹಣ ಮಾಡುವರು. ನ್ಯಾಯವಾದಿ ಅಶೋಕ ಮಾಣೂಕೆ, ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಚಿಂತನೆ ನಡೆಸುವರು. ಮಂಡ್ಯದ ಬಸವ ೌಂಡೇಷನ್ ಅಧ್ಯಕ್ಷ ಅಪರ್ಣ ಎಂ.ಶಿವಕುಮಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ವಾಭಿಮಾನಿ ಶರಣ ಮೇಳಕ್ಕೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಅಂದಾಜು 1 ಲಕ್ಷಕ್ಕೂ ಹೆಚ್ಚು ಬಸವ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಪ್ರಭುಲಿಂಗ ಸ್ವಾಮೀಜಿ, ಸತ್ಯಾದೇವಿ ಮಾತಾಜಿ, ಅಕ್ಕನಾಗಾಲಾಂಬಿಕೆ ಮಾತಾಜಿ, ಚಂದ್ರಕಾಂತ ಲುಕ್, ಅಶೋಕ ಬೆಂಡಿಗೇರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net