ಸಂಘಟಿತರಾಗಿ ಸವಾಲು ಸ್ವೀಕಾರ

padagrahan
ಶೋಷಿತರ ಸ್ವಾಭಿಮಾನಿ ಸಮಾವೇಶ ಮತ್ತು ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ರಾಜೇಶ್ ದೇವಾಡಿಗ ಉದ್ಘಾಟಿಸಿದರು
Published on

ಗಂಗೊಳ್ಳಿ: ಸಂಘಟಿತರಾಗಿ ಬದುಕುವುದರಿಂದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಉಡುಪಿ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಆಲೂರಿನಲ್ಲಿ ಸೋಮವಾರ ಶೋಷಿತರ ಸ್ವಾಭಿಮಾನಿ ಸಮಾವೇಶ ಮತ್ತು ಆಲೂರು ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ತಾಲೂಕು ಸಮಿತಿ ಸಂಚಾಲಕ ರಾಜು ಕೆ.ಸಿ.ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸಂಚಾಲಕ ವಕೀಲ ಟಿ.ಮಂಜುನಾಥ ಗಿಳಿಯಾರು, ಆಲೂರು ಪಂಚಾಯಿತಿ ಉಪಾಧ್ಯಕ್ಷೆ ಸಿಂಗಾರಿ, ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಜಿಲ್ಲಾ ಸಮಿತಿ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ, ತಾಲೂಕು ಮಹಿಳಾ ಸಮಿತಿ ಸಂಚಾಲಕಿ ಗೀತಾ ಸುರೇಶ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಹಕ್ಲಾಡಿ, ಮಂಜುನಾಥ ಹಳಗೇರಿ, ಶ್ರೀಕಾಂತ್ ಹಿಜಾಣ, ಗೋವಿಂದ ಹಳಗೇರಿ, ಚಂದ್ರ ಕೊರ್ಗಿ, ಪ್ರಭಾಕರ ಅಮಾಸೆಬೈಲು, ಚಂದ್ರ ಉಳ್ಳೂರು, ಶ್ರೀಧರ ಮೊಳಹಳ್ಳಿ, ಶ್ರೀನಿವಾಸ ಮೊಳಹಳ್ಳಿ, ಸುರೇಶ್ ಕುಮಾರ್ ಬೈಂದೂರು, ಶಿವರಾಜ್ ಬೈಂದೂರು, ಕುಮಾರ ಕೋಟ, ರಮೇಶ್ ಮರವಂತೆ, ಸುರೇಶ್ ಬಾರ್ಕೂರು, ಆಲೂರು ಗ್ರಾಮ ಶಾಖೆ ಸಂಚಾಲಕ ಕುಷ್ಠ ಹರ್ಕೂರು, ಕೋಶಾಧಿಕಾರಿ ಅಣ್ಣಪ್ಪ ಹರ್ಕೂರು ಮತ್ತು ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮ ಶಾಖೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಾಸ್ಕರ ಕುಂಟೋಳಿ ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಹಕ್ಲಾಡಿ ನೂತನವಾಗಿ ಆಯ್ಕೆಯಾದ ಆಲೂರು ಗ್ರಾಮ ಶಾಖೆ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರವಿ ಬನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ನಾಗೂರು ವಂದಿಸಿದರು.

ಗೌರವ

ವಕೀಲರಾದ ಮಂಜುನಾಥ ಗಿಳಿಯಾರ್ ಮತ್ತು ವಿಜಯ ಕುಮಾರ್ ಅವರನ್ನು ಆಲೂರು ಗ್ರಾಮ ಶಾಖೆ ವತಿಯಿಂದ ಸನ್ಮಾನಿಸಲಾಯಿತು. ಅಂಬೇಡ್ಕರ್ ಹೋರಾಟ ಕುರಿತಾದ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ಸಮಾಜದ ಹಿರಿಯ ಮಹಿಳೆಯರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿ ಸಮೀಕ್ಷಾ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net