ಸ್ವಾಗತ ಸಮಿತಿ ಕಚೇರಿ, ಸಮ್ಮೇಳನದ ಲೋಗೋ ಬಿಡುಗಡೆ

ಸ್ವಾಗತ ಸಮಿತಿ ಕಚೇರಿ, ಸಮ್ಮೇಳನದ ಲೋಗೋ ಬಿಡುಗಡೆ
Published on

ವಿರಾಜಪೇಟೆ: ಎಮ್ಮೆಮಾಡುವಿನಲ್ಲಿ ಜನವರಿ 12ರಂದು ‘ಸತ್ಯವಂತರ ಸಖ್ಯದಲ್ಲಿರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿರುವ ಕೂರ್ಗ್ ಜಂಇಯ್ಯತುಲ್ ಉಲಮಾ 50ನೇ ವಾರ್ಷಿಕ ಮಹಾ ಸಮ್ಮೇಳನ ಅಂಗವಾಗಿ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ ಹಾಗೂ ಸಮ್ಮೇಳನದ ಲೋಗೋ ಬಿಡುಗಡೆ ಎಮ್ಮೆಮಾಡು ಸೂಫಿ ಶಹೀದ್ ದರ್ಗಾ ಶರೀಫ್‌ನಲ್ಲಿ ಇತ್ತೀಚೆಗೆ ನಡೆಯಿತು.

ಸಯ್ಯದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಸುವರ್ಣ ಮಹೋತ್ಸವದ ಲೋಗೋವನ್ನು ಬಿಡುಗಡೆ ಮಾಡಿದರು.

ಪ್ರೌಢ ಶಾಲಾ ಮೈದಾನ ಸಮೀಪವಿರುವ ಕಟ್ಟಡದಲ್ಲಿ ಸ್ವಾಗತ ಸಮಿತಿಯ ಕಚೇರಿಯನ್ನು ಸಯ್ಯದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉದ್ಘಾಟಿಸಿದರು.

ಕೆಎಂಜೆ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಮರ್ಕಝುಲ್ ಹಿದಾಯ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಸಯ್ಯದ್ ಸೈಫುದ್ದೀನ್ ತಂಙಳ್, ಸಯ್ಯದ್ ನೌಮಾನ್ ತಂಙಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net