ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆ ನೀಡಲು ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯ: ಎಸ್. ವ್ಹಿ. ಸಂಕನೂರ

18GDG06
Published on

ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳನ್ನು ಖಾಯಂಗೊಳಿಸುವಲ್ಲಿ ಕಾನೂನು ತೊಡಕುಗಳನ್ನು ನಿವಾರಿಸಿ ಖಾಯಂಗೊಳಿಸಲು ಸರ್ಕಾರ ಮುಂದಾಗಬೇಕೆAದು ಉನ್ನತ ಶಿಕ್ಷಣ ಸಚಿವರಾದ ಎಮ್.ಸಿ ಸುಧಾಕರ ರವರಿಗೆ ಮನವಿ ಸಲ್ಲಿಸಿ ವಿಧಾನ ಪರಿಷತ್ತ ಸದಸ್ಯರಾದ ಎಸ್.ವ್ಹಿ.ಸಂಕನೂರ, ಹನಮಂತ ನಿರಾಣಿ, ಅ ದೇವೆಗೌಡ ಒತ್ತಾಯಿಸಿದರು
ರಾಜ್ಯದಲ್ಲಿಯ ಅತಿಥಿ ಉಪನ್ಯಾಸಕರು ನವೆಂಬರ್ 23 ರಿಂದ ವರ್ಗ ಬಹಿಸ್ಕಾರ ಮಾಡಿ ಸೇವಾ ಖಾಯಂಗೊಳಿಸಲು ಪ್ರಮುಖ ಬೇಡಿಕೆಯನ್ನು ಮುಂದಿಟ್ಟು, ಧರಣಿ ಸತ್ಯಾಗ್ರಹ ಮಾಡುತ್ತಾ ಬಂದಿರುವರು. ಇದರ ಜೊತೆಗೆ ಕಳೆದ 02 ದಿನಗಳಿಂದ ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಂಡು ಇಂದು ಬೆಂಗಳೂರನ್ನು ತಲುಪಿ ಅನಿರ್ಧಿಷ್ಟ ಸತ್ಯಾಗ್ರಹ ಪ್ರಾರಂಭಿಸಿರುವುದು ತಮಗೆ ತಿಳಿದ ಸಂಗತಿ.
 ಸರ್ಕಾರ ಈ ಮದ್ಯ ಅತಿಥಿ ಉಪನ್ಯಾಸಕರ ಕೆಲವೊಂದು ಬೇಡಿಕೆಗಳಾದ ರಜೆ ಸೌಲಭ್ಯ, ಕ್ರಪಾಂಕ ನೀಡುವುದು, ಆರೋಗ್ಯ ವಿಮೆ ಮತ್ತು ರೂ. 5 ಸಾವಿರ ವೇತನದಲ್ಲಿ ಹೆಚ್ಚಳ ಇತ್ಯಾದಿ ಸೌಲಭ್ಯಗಳನ್ನು ನೀಡುವ ಘೋಷಣೆಯನ್ನು ಸರ್ಕಾರ ಮಾಡಿರುವದು. ಆದರೆ ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಯಾದ ಸೇವಾ ಭದ್ರತೆಯನ್ನು ಒದಗಿಸದೇ ಇರುವುದರಿಂದ ಸಂಪೂರ್ಣ ನಿರಾಶೆಗೊಂಡು ಪುನಃ ಬೀದಿಗಿಳಿದು ಪ್ರೀಡಂ ಪಾರ್ಕ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಸಥಳಕ್ಕೆ ಬೇಟಿಕೊಟ್ಟು ಮಾತನಾಡಿ ಶೀಘ್ರವೇ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net