ವಿದ್ಯಾಥಿಗಳು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ಪ್ರೊ. ಸಂಕನೂರ

18GDG07
Published on

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ಗಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಜಯ ಪದವಿ ಪೂರ್ವ ಕಾಲೇಜು ಉತ್ತಮ ಕಲಾ ಪರಿಸರದೊಂದಿಗೆ ಶ್ರಮಿಸುತ್ತಿದೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಹೇಳಿದರು.
ನಗರದ ವಿಜಯ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಥಮ ವರ್ಷದ ಪಿಯುಸಿ ವಿದ್ಯಾಥಿರ್ಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಕಲಾ ಪರಿಸರದಲ್ಲಿ ಸೃಜನಶೀಲ ಚಿಂತನೆಯಿಂದ ಅಧ್ಯಯನ ಮಾಡಿ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.
ಮನಸ್ಸನ್ನು ಸೆಳೆಯುವ ಹಲವಾರು ಮಾಧ್ಯಮಗಳಿಂದ ದೂರವಿರಬೇಕು. ಮಾಧ್ಯಮವನ್ನು ಕೇವಲ ಅಧ್ಯಯನದ ಅನುಕೂಲಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು. ಅಂತಹ ಗುಣಾದಿಗಳನ್ನು ಹೊಂದಿದ ವಿದ್ಯಾಥಿರ್ಗಳು ಮಾತ್ರ ಸಾಧನೆಯ ಶಿಖರವನ್ನು ಮುಟ್ಟುತ್ತಾರೆ. ವಿಜಯ ಲಲಿತಕಲಾ ಸಂಸ್ಥೆ ಕಲಾ ೇತ್ರಕ್ಕೆ ಅಮೋ ಕೊಡುಗೆ ನೀಡುತ್ತ ಬಂದಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಇಂದು ಕುಟುಂಬ ಮತ್ತು ಶಿಣ ರ್ದುಬಲವಾಗುತ್ತಿದೆ. ಆದರೆ ನಾವು ಬದ್ಧತೆ ಪ್ರಬುದ್ಧತೆಯಿಂದ ಜ್ಞಾನದ ಬೆಳಕಿನಿಂದ ರ್ದುಬಲತೆಯನ್ನು ಓಡಿಸಬೇಕು. ಸತ್ವವಿಲ್ಲದ ಶಿಣದಲ್ಲಿ ಮೌಲ್ಯ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಮತ್ತು ಸಂಸ್ಥೆಯ ವ್ಯವಸ್ಥೆ ಕುರಿತು ಯೋಚಿಸದೆ ನಿಮ್ಮ ಜೀವನ ಜೋಕಾಲಿಯನ್ನು ನೀವೇ ತೂಗಬೇಕು. ದುಶ್ಚಟದಿಂದ ದೂರವಿರಿ. ಸಾಧನೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ಆಶಿರ್ವಚನ ನೀಡಿದರು.
ಕೆ.ಎನ್​ ಪಾಪಳೆ, ಚಂದ್ರಮೌಳಿ ಜಾಲಿ, ಶ್ರೀದೇವಿ ಯರಗಂಬಳಿಮಠ, ಅಶೋಕ ಅಕ್ಕಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net