

ಚಿಕ್ಕೋಡಿ: ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿರುವ ದೇಶದ ಅತೀ ದೊಡ್ಡ ದ್ವಿಚಕ್ರ ವಾಹನ ಮಾರಾಟ ಸಂಸ್ಥೆಯಾದ ಸುಜುಕಿ ಸಂಸ್ಥೆಯ ಆಕ್ಸಸ್ 125 ಹೊಸ ಟಿಎ್ಟಿ ಆವೃತ್ತಿ ಬೈಕ್ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರ ಮೆಚ್ಚುಗೆ ಪಡೆದಿದೆ ಎಂದು ಪಟ್ಟಣದ ಕೊಕನೆ ಅಟೋ ಲೈಯನ್ಸ್ ಪ್ರೈ. ಲಿಮಿಟೆಡ್‌ನ ಮಹಾಲಕ್ಷ್ಮೀ ಸುಜುಕಿ ಸಂಸ್ಥೆಯ ದ್ವಿಚಕ್ರ ವಾಹನ ಶೋರೂಮ್‌ನ ಜನರಲ್ ಮ್ಯಾನೇಜರ್ ರವೀಂದ್ರ ಪೋತದಾರ ಹೇಳಿದರು.
ಪಟ್ಟಣದ ಬಿ.ಕೆ. ಕಾಲೇಜು ರಸ್ತೆಯ ಅಂಬೇಡ್ಕರ್ ನಗರದ ಬಳಿಯ ಕೊಕನೆ ಅಟೋ ಲೈಯನ್ಸ್ ಪ್ರೈ. ಲಿಮಿಟೆಡ್‌ನ ಮಹಾಲಕ್ಷ್ಮೀ ಸುಜುಕಿ ಸಂಸ್ಥೆಯ ದ್ವಿಚಕ್ರ ವಾಹನ ಶೋರೂಮ್‌ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಜುಕಿ ಆಕ್ಸಸ್ 125 ಹೊಸ ಟಿಎ್ಟಿ ಆವೃತ್ತಿಯ ದ್ವಿಚಕ್ರ ವಾಹನವನ್ನು ಗ್ರಾಹಕರಿಂದ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಆಕ್ಸಸ್ ದ್ವಿಚಕ್ರ ವಾಹನವು ಹೊಸ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಆಕರ್ಷಕವಾಗಿದ್ದು, ಬ್ಲೂಟೂತ್ ಸಂಪರ್ಕದೊಂದಿಗೆ, 4.2 ಇಂಚಿನ ಡಿಸ್‌ಪ್ಲೇಯೊಂದಿಗೆ ಆಧುನಿಕ ತಂತ್ರಜ್ಞಾನದೊಂದಿಗೆ ಆಕರ್ಷಕವಾಗಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ಮಾರಾಟ ವ್ಯವಸ್ಥಾಪಕ ಸಂತೋಷ ರಾಯನ್ನವರ, ಸರ್ವಿಸ್ ವಿಭಾಗದ ಸಾಗರ ಪಾಟೀಲ, ಡಾ. ಮೀನಾಕ್ಷಿ ಕುಂಬಾರ, ಮಯೂರ ಹೆಳವಿ ಇತರರಿದ್ದರು.