ಸುವರ್ಣ ವಿಧಾನಸೌಧ ಚಲೋ 12ರಂದು

oplus_2
oplus_2
Published on

ರಾಮದುರ್ಗ: ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳಿಗೆ ಆಗ್ರಹಿಸಿ ಡಿ.12 ರಂದು ಸುವರ್ಣ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ ರಾಜ್ ತಿಳಿಸಿದರು.

ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.9.50 ರಷ್ಟು ಇಳುವರಿ ಆಧಾರದಲ್ಲಿ ಪ್ರತಿಟನ್ ಕಬ್ಬಿಗೆ 5,500 ರೂ. ನೀಡಬೇಕು. ಕಬ್ಬು ಖರೀದಿ ಮತ್ತು ಸರಬರಾಜು ಅಧಿನಿಯಮ 2013 ಕಾಯ್ದೆ ರದ್ದುಗೊಳಿಸಿ ಹಿಂದಿನ ಎಸ್‌ಎಪಿ ನಿಗದಿಪಡಿಸಬೇಕು. ರೈತವಿರೋಧಿ 2024ರ ಮಸೂದೆ ವಾಪಸ್ ಪಡೆಯಬೇಕು. ಜತೆಗೆ ಕಬ್ಬು ಪೂರೈಸಿದ 14 ದಿನಗಳ ಒಳಗೆ ರೈತರ ಬಿಲ್ ಪಾವತಿಸಬೇಕೆಂದು ತಿಳಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ವೈ.ಎಚ್.ಾಟೀಲ, ಮುಖಂಡ ಗೈಬು ಜೈನೆಖಾನ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ, ಎನ್.ಎಲ್. ಸಂಗೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net