

ಜಮಖಂಡಿ: ತಾಲೂಕಿನ ಹುಲ್ಯಾಳ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಸುವರ್ಣಾ ರಾಮಪ್ಪ ನ್ಯಾಮಗೌಡ ಆಯ್ಕೆಯಾಗಿದ್ದಾರೆ.
ದಾನಮ್ಮ ಹಿರೇಮಠ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಚುನಾವಣಾಧಿಕಾರಿ ತಾಪಂ ಇಒ ಸಂಜೀವ ಜುನ್ನೂರ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತಾಪಂ ಎಫ್ಡಿಎ ರಾಜೀವ ಗುಡೆನ್ನವರ ಕಾರ್ಯನಿರ್ವಹಿಸಿದರು.
ಗ್ರಾಪಂ ಸದಸ್ಯರಾದ ಮಹಾದೇವ ಗುಡೆನ್ನವರ, ದಾನಮ್ಮ ಹಿರೇಮಠ, ಶ್ರೀಶೈಲ ಸುನಗದ, ಸಿದ್ದಪ್ಪ ತುಂಗಳ, ಬಂಗಾರೆವ್ವ ಝಲ್ಫಿ, ಲಚ್ಚಪ್ಪ ಹೆಬ್ಬಾಳಟ್ಟಿ, ಸವಿತಾ ಕೃಷ್ಣಗೋಳ, ಹನುಮವ್ವ ಹಲಗಲಿ, ಹಿರಿಯರಾದ ಅಶೋಕ ಝುಲ್ಪಿ, ಮಾನಿಂಗ ಮುಗಳಖೋಡ, ನಿಂಗಪ್ಪ ಮುಂಡಾಗಣಿ ಇದ್ದರು.