

ಬೆಳ್ತಂಗಡಿ ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿಗೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ಪುತ್ತಿಗೆ ಮಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಜಿರೆಯ ಸುಜಾತಾ ಮತ್ತು ವಾಸುದೇವ ಭಟ್ ದಂಪತಿ ಪುತ್ರ ಜ್ಞಾನಮೂರ್ತಿ ಭಟ್ ಮತ್ತು ಸುಪ್ರಿಯಾ ಅವರು ಸೇವಾರೂಪವಾಗಿ ಶನಿವಾರ ಸ್ವರ್ಣ ಕವಚ ಸಮರ್ಪಿಸಿದರು.
ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರ ಧಾರ್ಮಿಕ ಪೂಜಾ ವಿಧಿಗಳೊಂದಿಗೆ ಬೆಳಗ್ಗೆ 108 ತೆಂಗಿನಕಾಯಿ ಗಣಹವನ, ಮಹಾಗಣಪತಿಗೆ ಕಲಶಾಭಿಷೆೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಹಾಗಣಪತಿಗೆ ಸಮರ್ಪಿಸಲಿರುವ ಸ್ವರ್ಣ ಕವಚವನ್ನು ದೇವಾಲಯ ಮುಂಭಾಗದಿಂದ ಭಕ್ತವರ್ಗ ಹಾಗೂ ಕುಟುಂಬ ಮೆರವಣಿಗೆಯಲ್ಲಿ ತಂದರು.
ಸ್ವರ್ಣ ಕವಚವನ್ನು ನಿರ್ಮಿಸಿಕೊಟ್ಟ ಬೆಳ್ತಂಗಡಿಯ ಶೃಂಗಾರ್ ಜುವೆಲ್ಲರ್ಸ್ ಮಾಲೀಕ ಸುಬ್ರಹ್ಮಣ್ಯ ರಾವ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ದಯಾನಂದ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುರಂದರ ಕಡೀರ, ವಿಠಲ ಕುರ್ಲ, ಪ್ರಶಾಂತ್ ಪೂವಾಜೆ, ಹೇಮಾವತಿ, ಯಶೋದಾ, ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ, ಸುಬ್ರಹ್ಮಣ್ಯ ತೊಡ್ತಿಲ್ಲಾಯ, ಕೊಕ್ಕಡ ಸೊಸೈಟಿ ಅಧ್ಯಕ್ಷ ಕುಶಾಲಪ್ಪ ಗೌಡ, ರತ್ನಾಕರ ಪಾಂಗಣ್ಣಾಯ ಮೊದಲಾದವರು ಉಪಸ್ಥಿತರಿದ್ದರು.