ನಾಗಮಲೆಯ ಮಾದಪ್ಪನಿಗೆ ಸುತ್ತೂರುಶ್ರೀ ವಿಶೇಷ ಪೂಜೆ

24 HANUR 4 A
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ನಾಗಮಲೆಯ ಮಾದಪ್ಪನ ಸನ್ನಿಧಿಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ವಿವಿಧ ಮಠಾಧೀಶರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲವನ್ನು ವಿವಿಧ ಪುಷ್ಪಗಳು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿದ ಶ್ರೀಗಳು ರುದ್ರಾಭಿಷೇಕದ ಪೂಜೆಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಉಪಾಹಾರ ಸೇವಿಸಿ ಆ ಭಾಗದ ಪ್ರಕೃತಿ ಸೌಂದರ್ಯ ಸವಿದರು. ಇದೇ ವೇಳೆ ನಾಗಮಲೆಯ ಭಾಗದಲ್ಲಿ ವಾಸಿಸುವ ಶಾಲಾ ಮಕ್ಕಳಿಂದ ಶಿಕ್ಷಣದ ಬಗ್ಗೆ ಮಾಹಿತಿ ಪಡೆದು ಯೋಗಕ್ಷೇಮ ವಿಚಾರಿಸಿದರು. ಮ.ಬೆಟ್ಟದ ಮಾದಪ್ಪನ ಸನ್ನಿಧಿಗೆ ಭೇಟಿ ನೀಡಿದ್ದ ಶ್ರೀಗಳು ದೇವರ ದರ್ಶನ ಪಡೆದು ಚಿನ್ನದ ರಥೋತ್ಸವದಲ್ಲಿ ಭಕ್ತರು ಹಾಗೂ ವಿವಿಧ ಮಠಾಧೀಶರೊಂದಿಗೆ ಭಾಗಿಯಾದರು.

ಮ.ಬೆಟ್ಟ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕುಂದೂರು ಮಠದ ಶ್ರೀಶರತ್‌ಚಂದ್ರ ಸ್ವಾಮೀಜಿ, ಮೈಸೂರು ಶ್ರೀನೀಲಕಂಠ ಮಠದ ನೀಲಕಂಠ ಸ್ವಾಮೀಜಿ, ಗುಂಡೇಗಾಲದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹೊಂಡರಬಾಳುವಿನ ಶ್ರೀನೀಲಕಂಠ ಶಿವಚಾರ್ಯ ಸ್ವಾಮೀಜಿ, ಅಜ್ಜೀಪುರದ ಶ್ರೀನಂದೀಶ ಶಿವಾಚಾರ್ಯ ಸ್ವಾಮೀಜಿ, ಚಾಮರಾಜನಗರ ಮತ್ತು ಮೈಸೂರಿನ ವಿವಿಧ ಮಠಗಳು ಮಠಾಧೀಶರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net