ಸಮಾಜದ ಏಳಿಗೆಗೆ ಸುತ್ತೂರುಶ್ರೀ ಕೊಡುಗೆ ಅಪಾರ

4
Published on

ಮೈಸೂರು:  ಧರ್ಮದ ಜತೆಗೆ ಆರೋಗ್ಯ, ಅಕ್ಷರ, ಅನ್ನ ದಾಸೋಹ ನಡೆಸುವ ಮೂಲಕ ಸಮಾಜದ ಏಳಿಗೆಗೆ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಶ್ರಮಿಸಿದ್ದರು ಎಂದು ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯದ ನಿರ್ದೇಶಕ ಸಿ.ಎಸ್.ಶಿವಸ್ವಾಮಿ ಹೇಳಿದರು.

ಕರ್ನಾಟಕ ರಾಜ್ಯ ವೀರಶೈವ-ಲಿಂಗಾಂುತ ನೌಕರರ ಕ್ಷೇವಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಘಟಕದಿಂದ ನಗರದ ಶ್ರೀಶಿವರಾತ್ರಿ ರಾಜೇಂದ್ರ ಭವನದಲ್ಲಿ ಬುಧವಾರ ಆಂೋಜಿಸಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಂುಂತಿ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸವಾರಂಭ ಉದ್ಘಾಟಿಸಿ ವಾತನಾಡಿದರು.

ತನಗಾಗಿ ಏನನ್ನೂ ಬಯಸದೆ, ಸಮಾಜದ ಸರ್ವರ ಯೋಗಕ್ಷೇಮಕ್ಕಾಗಿ ದುಡಿಯಲು ಆರಂಭಿಸಿದ ರಾಜೇಂದ್ರ ಶ್ರೀಗಳು, ಏಕಕಾಲದಲ್ಲಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಚಕ್ರವರ್ತಿಗಳಾಗಿ ಮೆರೆದವರು. ಈ ಮೂಲಕ ಸಮಾಜದ ಉನ್ನತಿಗೆ ಮಹತ್ವ ಪೂರ್ಣ ಕೊಡುಗೆ ನೀಡಿದ್ದಾರೆ. ಅವರು ವಾಡಿದ ಸೇವೆ ಅಪಾರವಾಗಿದ್ದು, ಸುತ್ತೂರು ಮಠ ಇಲ್ಲದಿದ್ದರೆ ನಾವೆಲ್ಲರೂ ಈ ಸಂತೋಷ ಕೂಟದಲ್ಲಿ, ಸವಾಜದಲ್ಲಿ ಸೇವೆ ಮಾಡಲು ಆಗುತ್ತಿರಲಿಲ್ಲ ಎಂದರು.

ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಸಂಸ್ಥೆ ಉಪನಿರ್ದೇಶಕ ಎಸ್.ಸ್ವಾಮಿ ಅವರು ರಾಜೇಂದ್ರ ಶ್ರೀ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಮೈಸೂರಿನ ಕುದೇರು ಮಠದ ಕಿರಿಯ ಶ್ರೀ ಗುರುಲಿಂಗ ಸ್ವಾಮೀಜಿ, ಚಾಮರಾಜೇಶ್ವರಿ ಅಕ್ಕನ ಬಳಗದ ಅಧ್ಯಕ್ಷೆ ವಾದಲಾಂಬಿಕ ನಂಜುಂಡಸ್ವಾಮಿ, ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಂು ಹಿರಿಂು ವೈದ್ಯಕೀಂು ತಜ್ಞ ಡಾ.ಪಿ.ಶಿವಶಂಕರ್, ಶ್ರೀ ಗುರುಮಲ್ಲೇಶ್ವರ ಪದವೀಧರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶ್ವಿನ್ ಆರ್.ಪಾಳೇಗಾರ್, ಉಪಾಧ್ಯಕ್ಷ ಕೆ.ಎಂ.ಕಲ್ಮಳ್ಳಿ ನಟರಾಜು, ರಾಜ್ಯ ವೀರಶೈವ ಲಿಂಗಾಂುತ ನೌಕರರ ಕ್ಷೇವಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಆಲೂರು ಬಸವರಾಜು, ಗೌರವಾಧ್ಯಕ್ಷ ಎಂ.ಕೆ.ಸ್ವಾಮಿ, ರಾಜ್ಯ ಸಂಚಾಲಕ ರಾಜಶೇಖರ, ಪ್ರಧಾನ ಕಾರ್ಯದರ್ಶಿ ಪಿ.ಪ್ರಭುಸ್ವಾಮಿ, ನಿಕಟ ಪೂರ್ವ ಕಾಂರ್ುದರ್ಶಿ ಕೆಂಪಣ್ಣ, ಸಂಘದ ಗೌರವ ಸಲಹೆಗಾರ ಡಿ.ಎಸ್.ನಾಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ವಿ.ಬಸವರಾಜು, ಕಾಂರ್ುದರ್ಶಿ ಶಿವಕುವಾರ್, ವಾಜಿ ಉಪ ಮೇಂುರ್ ದಕ್ಷಿಣಾಮೂರ್ತಿ, ಮರಿಮಲ್ಲಪ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಶೈಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net