ಭಕ್ತಿಯಿಂದ ಬದುಕು ಸಾಗಿಸಿದರೆ ಮಾನವ ಮಹಾದೇವನಾಗಬಲ್ಲ : ಸುತ್ತೂರು ಜಗದ್ಗುರುಗಳು ನುಡಿ

Bharatanur
ಕಾಳಗಿ ತಾಲೂಕಿನ ಭರತನೂರಿನಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು `ಭರತನೂರಿನ ಬೆಳಕು' ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಡಾ.ಶಿವಾನಂದ ಸ್ವಾಮೀಜಿ, ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಶ್ರೀ ವೀರಮಹಾಂತ ಶಿವಾಚಾರ್ಯ, ಶ್ರೀ ಶಿವಲಿಂಗ ಸ್ವಾಮೀಜಿ ಇತರರಿದ್ದರು
Published on

ಭರತನೂರಿನಲ್ಲಿ ಪುಣ್ಯಸ್ಮರಣೆ, ಪಟ್ಟಾಧಿಕಾರ ರಜತ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಬದುಕಿನುದ್ದಕ್ಕೂ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ನಂಬಿಕೆ, ಭಕ್ತಿ ಹಾಗೂ ಶ್ರದ್ಧೆಯಿಂದ ಜೀವನ ಸಾಗಿಸಿದಾಗ ಮಾತ್ರ ಮಾನವ ಮಹದೇವನಾಗಲು ಸಾಧ್ಯ ಎಂದು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನುಡಿದಿರು.

ಕಾಳಗಿ ತಾಲೂಕಿನ ಭರತನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತಪಸ್ವಿ ಶ್ರೀ ಗುರುನಂಜೇಶ್ವರ ಸ್ವಾಮಿಗಳ ೩೧ನೇ ಪುಣ್ಯಸ್ಮರಣೆ ಹಾಗೂ ಪೀಠಾಧಿಪತಿ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳ ಪಟ್ಟಾಧಿಕಾರ ರಜತ ಮಹೋತ್ಸವ, ತುಲಾಭಾರ ಸಮಾರಂಭದಲ್ಲಿ ಭರತನೂರಿನ ಬೆಳಕು ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಅವರು, ತ್ರಿವಿಧ ದಾಸೋಹಕ್ಕೆ ಹೆಸರಾಗಿ, ಹತ್ತು ಶತಮಾನಗಳ ಇತಿಹಾಸ ಹೊಂದಿರುವ ಸುತ್ತೂರು ಮಠದ ಆದಿಯಾಗಿ ದೇಶದಲ್ಲಿ ಸಾವಿರಾರು ಮಠ-ಮಾನ್ಯಗಳು ಉತ್ತಮ ಕೆಲಸ ಮಾಡುತ್ತಿವೆ.

ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಮುಗಳನಾಗಾಂವ್‌ದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಚವದಾಪುರಿಯ ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯ, ನಿಂಬರ್ಗಾದ ಶಿವಲಿಂಗ ಸ್ವಾಮೀಜಿ, ಶಾಸಕ ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು.

ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಲಿಂಗರೆಡ್ಡಿ ದೇಶಮುಖ, ಪ್ರಮುಖರಾದ ಶಂಭುಲಿAಗ ಗುಂಡಗುರ್ತಿ, ಮಲ್ಲಿನಾಥ ಪಾಟೀಲ್ ಕಾಳಗಿ, ವಿಜಯಕುಮಾರ ಪರೂತೆ, ಬಸವರಾಜ ಸಜ್ಜನಶೆಟ್ಟಿ, ಗೋವಿಂದರೆಡ್ಡಿ ತುಮಕುಂಟಿ, ಜಗದೀಶ ಪಾಟೀಲï ರಾಜಾಪುರ, ಮುರಗಯ್ಯ ಸ್ವಾಮಿ ಮಠಪತಿ, ಸತ್ಯನಾರಾಯಣರಾವ ಮಹಾರಾಜ, ಅಣ್ಣಾರಾವ ಪಾಟೀಲ್, ಶಾಮರಾವ ಮಂಗಲಗಿ, ರೇವಣಸಿದ್ದಪ್ಪ ಮಾಸ್ಟರ್ ದುಕಾನ್, ನಾಗೀಂದ್ರಪ್ಪ ಮಂಗಲಗಿ ಇತರರಿದ್ದರು.

ಡಾ.ವಿಜಯಕುಮಾರ ಪರೂತೆ ಹಾಗೂ ರೇವಣಸಿದ್ದಪ್ಪ ದುಕಾನ ಸಂಪಾದಕತ್ವದಲ್ಲಿ ಹೊರ ತಂದಿರುವ ಭರತನೂರಿನ ಬೆಳಕು ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು. ಸಂಜೆ ನಡೆದ ಸುಧಾ ಬರಗೂರ, ಇಂದುಮತಿ ಸಾಲಿ, ಗುಂಡಣ್ಣ ಡಿಗ್ಗಿ ಅವರ ಹಾಸ್ಯ ಕಾರ್ಯಕ್ರಮ ಭಕ್ತರನ್ನು ನಗೆಗಡಲಲ್ಲಿ ತೆಲಿಸಿತು. ಸತ್ಯನಾರಾಯಣರಾವ ಮಹಾರಾಜ, ಮಲ್ಲಿಕಾರ್ಜುನ ಶಾಸ್ತಿç ಐನಾಪುರ ನಿರೂಪಣೆ ಮಾಡಿದರು. ಅಸಂಖ್ಯಾತ ಭಕ್ತರು ಬನ್ನಟ್ಟಿ ಮಾಲ್ದಿ ಪ್ರಸಾದ ಸವಿದರು.

(ಬಾಕ್ಸ)

೭೮ಕೆಜಿ ಬೆಳ್ಳಿಯಿಂದ ತುಲಾಭಾರ

ಭರತನೂರು ವಿರಕ್ತ ಮಠದ ಪೀಠಾಧಿಪತಿ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳ ಪಟ್ಟಾಧಿಕಾರಿ ೨೫ನೇ ರಜತ ಮಹೋತ್ಸವ ನಿಮಿತ್ತ ಭಕ್ತರಿಂದ ೭೮ ಕೆಜಿ ಬೆಳ್ಳಿಯಲ್ಲಿ ತುಲಾಭಾರ ಸೇವೆ ನೆರವೇರಿಸಲಾಯಿತು. ಶ್ರೀಗಳ ಕೈಯಲ್ಲಿ ಪವಾಡ ಪುರುಷ ಶ್ರೀ ಗುರುನಂಜೇಶ್ವರ ಸ್ವಾಮಿಗಳ ಬೆಳ್ಳಿ ಮೂರ್ತಿಯನ್ನಿಟ್ಟು, ಬೆಳ್ಳಿ ಕಿರೀಟ ತೊಡಿಸಿ ತುಲಾಭಾರ ಸೇವೆ ಮಾಡಲಾಯಿತು. ಈ ವೇಳೆ ಜನರಿಂದ ಶ್ರೀ ಗುರುನಂಜೇಶ್ವರ ಮಹಾರಾಜ್‌ಕೀ ಜೈ.. ಜೈ ಜೈ ಗುರುದೇವ ಸೇರಿ ವಿವಿಧ ಘೋಷಗಳು ಮೊಳಗಿದವು.

(ಕೋಟ್)

ಮಠ-ಮಾನ್ಯಗಳನ್ನು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿವೆ. ಭಕ್ತಿಯಲ್ಲಿ ದೊಡ್ಡ ಶಕ್ತಿಯಿದೆ. ಆ ಶಕ್ತಿಯೇ ಭಾರತವಾಗಿದೆ. ಭಾರತೀಯರಾದ ನಾವು ದೇಶದ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಂಡು, ದೇಶದ ಪರಂಪರೆಯನ್ನು ಕಾಪಾಡಿಕೊಂಡು ಹೊಗಬೇಕಾಗಿದೆ.

| ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸುತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net