ಮೈಸೂರು ಮೃಗಾಲಯಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಸುತ್ತೂರು ಮಠ

suttur mutt
Published on

ಮೈಸೂರು: ಸುತ್ತೂರು ಮಠದ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜಯಂತಿ ಪ್ರಯುಕ್ತ ಆ.29 ರಂದು ಮೃಗಾಲಯದ ಎಲ್ಲ ಪ್ರಾಣಿಗಳ ಒಂದು ದಿನದ ಆಹಾರ ನಿರ್ವಹಣೆಯ ವೆಚ್ಚಕ್ಕಾಗಿ ಸುತ್ತೂರು ಮಠದಿಂದ 1 ಲಕ್ಷ ರೂ. ದೇಣಿಗೆ ನೀಡಲಾಗಿದೆ.

ಸತತ 13ನೇ ಬಾರಿಗೆ ಈ ಕೊಡುಗೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೃಗಾಲಯಕ್ಕೆ ನೀಡಿದ್ದಾರೆ. ಶ್ರೀ ಮಠವು ಈ ಮೃಗಾಲಯದ ಸಂರಕ್ಷಣಾ ಕಾರ್ಯದಲ್ಲಿ ನಿರಂತರ ಭಾಗಿಯಾಗುತ್ತಿದೆ. ಮಠದ ಈ ಸೇವಾ ಕಾರ್ಯಕ್ಕೆ ಮೃಗಾಲಯ ಆಭಾರಿಯಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net