ವೇಗವಾಗಿ ಚಲಿಸುತ್ತಿದ್ದ ಕಾರು ಉರುಳಿಬಿದ್ದು ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ

Death 1 Jan 2020
Published on

ಹಾವೇರಿ: ವೇಗವಾಗಿ ಚಲಿಸುತ್ತಿದ್ದ ಕಾರು ಹಿರೆಕೇರೂರು ತಾಲೂಕಿನ ಸುತಕೋಟಿ ಗ್ರಾಮದ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಟ್ಟು ಓರ್ವ ಗಾಯಗೊಂಡಿದ್ದಾನೆ.

ಕಾರ್ತಿಕ್ ಈಳಗೇರ್ (24) ಹಾಗೂ ಪವನ್ ಬೊಗಾವಿ (22) ಮೃತಪಟ್ಟ ಯುವಕರು. ಅಪಘಾತದಲ್ಲಿ ಗಾಯಗೊಂಡ ಸಂತೋಷ ರಾಗಿಕೊಪ್ಪ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರು ಹಂಸಭಾವಿ ಗ್ರಾಮದವರು. ಕಾರ್ಯಕ್ರಮದ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದರು. ಗ್ರಾಮದ ಬಳಿ ಕಾರು ಚಲಿಸುತ್ತಿದ್ದ ವೇಳೆ ಗ್ರಾಮಸ್ಥರು ರಸ್ತೆ ದಾಟುತ್ತಿದ್ದರು. ಈ ವೇಳೆ ಕಾರು ನಿಯಂತ್ರಿಸಲು ಕಾರು ಚಾಲಕ ಯತ್ನಿಸಿದಾಗ ನಿಯಂತ್ರಣ ತಪ್ಪಿ ಉರುಳಿಬಿತ್ತು ಎಂದು ತಿಳಿದು ಬಂದಿದೆ. ಹಂಸಭಾವಿ ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net