ಹುಬ್ಬಳ್ಳಿ: ತಾಲೂಕಿನ ಸುತಗಟ್ಟಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರೆಯು ಡಿ. 18ರಂದು ನಡೆಯಲಿದೆ.
ಶ್ರೀ ಮೈಲಾರ ದೇವರ ಭಂಡಾರ ಪೂಜೆಯು ಸಂಜೆ 6 ಗಂಟೆಗೆ ಜರುಗುವುದು. ನಂತರ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮೈಲಾರಲಿಂಗೇಶ್ವರ ದೇವಸ್ಥಾನ ಕಮಿಟಿ ಕೋರಿದೆ.