

ಗಂಗಾವತಿ:ನಿತ್ಯ ಯೋಗ ಮಾಡುವುದರಿಂದ ರೋಗದಿಂದ ದೂರ ಉಳಿಯಬಹುದಾಗಿದ್ದು, ಯೋಗ ಕಲಿಕೆ ದೈನಂದಿನ ಕೆಲಸಗಳಲ್ಲೊಂದಾಗಬೇಕಿದೆ ಎಂದು ಕೊಪ್ಪಳ ರಾಮಕೃಷ್ಣಾಶ್ರಮದ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ನಗರದ ಮಹಾನ್ ಕಿಡ್ಸ್ ಸ್ಕೂಲ್ ಆವರಣದಲ್ಲಿ ಸ್ನೇಹ ಬಳಗ ಯೋಗ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಯೋಗ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಯೋಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯಿದ್ದು, ಹಲವು ದೇಶಗಳು ಯೋಗಕ್ಕೆ ಆದ್ಯತೆ ನೀಡಿವೆ. ನಿತ್ಯ ಯೋಗದಿಂದ ಕ್ರೀಯಾಶೀಲತೆ ಉಳಿಸಿಕೊಳ್ಳಲು ಸಾಧ್ಯತೆಗಳಿವೆ ಎಂದರು.
ಇದನ್ನೂ ಓದಿ: ಜಿ-೨೦ ಪ್ರತಿನಿಧಿಗಳಿಂದ ಯೋಗ ಅಭ್ಯಾಸ
ಶಾಲಾಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನ್‌ಮಠ ಮಾತನಾಡಿ, ಜನರ ಅನುಕೂಲಕ್ಕಾಗಿ ಯೋಗ ಶಿಬಿರ ಹಮ್ಮಿಕೊಂಡಿದ್ದು, ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಆರ್ಯವೈಶ್ಯ ಸಮಾಜದ ತಾಲೂಕಾಧ್ಯಕ್ಷ ದರೋಜಿ ಶ್ರೀರಂಗ ಶ್ರೇಷ್ಟಿ, ಸ್ನೇಹ ಬಳಗದ ಸಂಚಾಲಕರಾದ ಶ್ಯಾಮಮೂರ್ತಿಐಲಿ, ಸಂಗಮೇಶ ಕೋಟಿ, ಅಮರೇಗೌಡ, ಯೋಗ ಶಿಕ್ಷಕ ವೀರೇಶಯ್ಯಸ್ವಾಮಿ, ಹಿರಿಯ ನಾಗರಿಕರು ಭಾಗವಹಿಸಿದ್ದರು.