ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಯುವತಿ ಅನುಮಾನಾಸ್ಪದ ಸಾವು

crime
Published on

ಮೈಸೂರು: ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಜತೆಯಲ್ಲಿದ್ದ ಯುವಕ ನಾಪತ್ತೆಯಾಗಿದ್ದಾನೆ.ವಿನೋಬಾ ರಸ್ತೆಯಲ್ಲಿರುವ ಕೋರಂ ಹೋಟೆಲ್ ನಲ್ಲಿ  ಈ ಘಟನೆ ನಡೆದಿದೆ. ಅಪೂರ್ವ ಶೆಟ್ಟಿ ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿ. ಕಳೆದ ಎರಡು ದಿನಗಳ ಹಿಂದೆ ಯುವಕನ ಜೊತೆ ಬಂದ ಅಪೂರ್ವ ಶೆಟ್ಟಿ ಕೊಠಡಿ ಪಡೆದು ತಂಗಿದ್ದಾರೆ. ಇಂದು ಯುವಕ ಕೊಠಡಿಯಲ್ಲಿ ಇಲ್ಲದ ವೇಳೆ ಯುವತಿ ಮೃತದೇಹ ಪತ್ತೆಯಾಗಿದೆ.


ಯುವತಿ ಬಾಯಲ್ಲಿ ನೊರೆ ಬರುತ್ತಿದ್ದು ಯುವಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಯುವತಿ ಸಾವು ಸಹಜವೋ ಕೊಲೆಯೋ ತನಿಖೆ ನಂತರ ಖಚಿತವಾಗಲಿದೆ. ದೇವರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಮೃತಪಟ್ಟ ಯುವತಿ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net