ರತ್ನಾಪುರ ಗ್ರಾಮದಲ್ಲಿ ವಾಮಾಚಾರದ ಶಂಕೆ

Suspicion of witchcraft
ಭದ್ರಾವತಿ ತಾಲೂಕಿನ ರತ್ನಾಪುರ ಗ್ರಾಮದ ಮನೆ ಮುಂದೆ ವಾಮಾಚಾರ ನಡೆಸಿರುವುದು.
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ಮನೆ ಮುಂಭಾಗ ಕಿಡಿಗೇಡಿಗಳು ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ರತ್ನಾಪುರ ಗ್ರಾಮದ ಮಂಜ ಎಂಬುವರ ಮನೆ ಮುಂದೆ ಮಾಟಮಂತ್ರ ಮಾಡಲಾಗಿದೆ. ಮಂಜ ಅವರು ಕುಟುಂಬ ಸಮೇತ ದೇವಸ್ಥಾನಕ್ಕೆಂದು ಹೊರ ಜಿಲ್ಲೆಗೆ ಹೋಗಿದ್ದರು. ಮನೆಯಲ್ಲಿ ಮಕ್ಕಳಿಬ್ಬರು ಮಾತ್ರ ಇದ್ದು, ಮಧ್ಯರಾತ್ರಿ ಅರಿಶಿಣ, ಕುಕುಂಮ ಸಹಿತ ಪೂಜೆ ಮಾಡಲಾಗಿದೆ. ಸ್ಥಳದಲ್ಲಿ ಮೊಟ್ಟೆಗಳು, ಮೀನುಗಳು, ಮಣ್ಣಿನಿಂದ ಮಾಡಿದ ಗೊಂಬೆಗಳು, ತೆಂಗಿನಕಾಯಿ, ಬಾಳೆಹಣ್ಣು, ಅರಿಶಿಷಣ, ಕುಂಕುಮ, ಲಿಂಬೆಹಣ್ಣು ಸೇರಿದಂತೆ ಮತ್ತೀತರ ಪೂಜಾ ಸಾಮಗ್ರಿ ಪತ್ತೆಯಾಗಿವೆ. ಈ ಘಟನೆ ಕುಟುಂಬದವರು ಹಾಗೂ ಸುತ್ತಮುತ್ತಲಿನ ಮನೆಗಳ ನಿವಾಸಿಗಳನ್ನು ಆತಂಕಿತರನ್ನಾಗಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net