ನಾಲ್ವರು ಕಾಂಗ್ರೆಸ್ ಮುಖಂಡರ ಅಮಾನತು

Published on

ಕಾಸರಗೋಡು: ಪೆರಿಯದಲ್ಲಿ ಯುವ ಕಾಂಗ್ರೆಸ್ ಮುಖಂಡರಿಬ್ಬರ ಕೊಲೆ ಪ್ರಕರಣದ ಆರೋಪಿಯ ಪುತ್ರನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಾಲ್ವರು ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣನ್ ಪೆರಿಯ, ಉದುಮ ಮಂಡಲದ ಯುಡಿಎಫ್ ಸಂಚಾಲಕ, ಬ್ಲಾಕ್ ಪಂಚಯಿತಿ ಮಾಜಿ ಅಧ್ಯಕ್ಷ ರಾಜನ್ ಪೆರಿಯ, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಪ್ರಮೋದ್ ಪೆರಿಯ ಹಾಗೂ ರಾಮಕೃಷ್ಣನ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

ಯುವ ಕಾಂಗ್ರೆಸ್ ಮುಖಂಡರಾದ ಪೆರಿಯ ಕಲ್ಯೋಟ್ ನಿವಾಸಿಗಳಾದ ಶರತ್‌ಲಾಲ್ ಹಾಗೂ ಕೃಪೇಶ್ ಅವರನ್ನು ಅಮಾನುಷವಾಗಿ ಕೊಲೆಗೈದ ಪ್ರಕರಣದಲ್ಲಿ 13ನೇ ಆರೋಪಿ, ಸಿಪಿಎಂ ನೇತಾರರೊಬ್ಬರ ಪುತ್ರನ ವಿವಾಹ ಸಮಾರಂಭದಲ್ಲಿ ಈ ನಾಲ್ಕು ಮಂದಿ ಪಾಲ್ಗೊಂಡಿದ್ದು, ಆರೋಪಿ ಜತೆ ಫೋಟೋ ಹಂಚಿಕೊಂಡಿದ್ದನ್ನು ಕೆಪಿಸಿಸಿಯ ತಪಾಸಣಾ ಸಮಿತಿ ಪತ್ತೆಹಚ್ಚಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net