ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್‌ ಅಮಾನತು

Suspended
Published on

ಕಾರವಾರ: ಹೈಕೋರ್ಟ್ ಆದೇಶ ಹಾಗೂ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಸಮರ್ಪಕವಾಗಿ ಪಾಲಿಸದ ಕಾರಣ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ್(ಇಇ) ರಾಜೀವ ನಾಯ್ಕ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಚೇತನ ಎಂ.ಅವರು ಈ ಆದೇಶ ಹೊರಡಿಸಿದ್ದಾರೆ. ರಾಜೀವ ನಾಯ್ಕ ಅವರಿಂದ ತೆರವಾದ ಸ್ಥಾನಕ್ಕೆ ಅಂಕೋಲಾ ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮು ಗುನಗಿ ಅವರನ್ನು ನೇಮಿಸಿ ಆದೇಶಿಸಿದ್ದಾರೆ.

ಕಾರಣವೇನು..?

2024 ರ ಕರೆಯಲಾದ ಬಹುಗ್ರಾಮ ಕುಡಿಯುವ ನೀರು ಯೋಜನೆಯಂದರ ಟೆಂಡರ್‌ನ ತಾಂತ್ರಿಕ ಮೌಲ್ಯಮಾಪನ ಅಸಮರ್ಪಕವಾಗಿರುವ ಬಗ್ಗೆ ಗುತ್ತಿಗೆದಾರ ಅನಿಲ್‌ಕುಮಾರ್ ಶೆಟ್ಟಿ ಇಲಾಖೆಯ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಮರು ತಾಂತ್ರಿಕ ಮೌಲ್ಯಮಾಪನ ಮಾಡುವಂತೆ ಮೇಲ್ಮನವಿ ಪ್ರಾಽಕಾರ ಇಇ ಸೂಚಿಸಿತ್ತು. ಆದರೆ, ಇಇ ರಾಜೀವ ನಾಯ್ಕ ಅವರು ಹೈಕೋರ್ಟ್ಗೆ ಹೋಗಿದ್ದರು. ಮೊದಲ ಆದೇಶದಲ್ಲಿ ಹೈಕೋರ್ಟ್ ರಾಜೀವ ನಾಯ್ಕ ಪರ ತೀರ್ಪು ನೀಡಿತ್ತು. ಆದರೆ, ಅನಿಲ್ ಕುಮಾರ್ ಶೆಟ್ಟಿ ಮೇಲ್ಮನವಿ ಸಲ್ಲಿಸಿದಾಗ ರಾಜೀವ ನಾಯ್ಕ ವಿರುದ್ಧ ತೀರ್ಪು ಹೊರ ಬಂದಿತ್ತು. ಆದರೂ ಆದೇಶ ಪಾಲನೆ ಮಾಡದ ರಾಜೀವ ನಾಯ್ಕ ತಾಂತ್ರಿಕ ಮೌಲ್ಯಮಾಪನ ಮಾಡುವ ಬದಲು ಮರು ಟೆಂಡರ್ ಕರೆದಿದ್ದರು ಎನ್ನಲಾಗಿದೆ. ರಾಜೀವ ನಾಯ್ಕ ಅವರು ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದ್ದು, ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net