ದಕ್ಷ ಐಪಿಎಸ್ ಅಧಿಕಾರಿ ಅಮಾನತು ಖಂಡನೀಯ

IMG-20250620-WA0179_1
ಮಾಜಿ ಸಚಿವ ಸಾ ರಾ ಮಹೇಶ್ ವಾಲ್ಮೀಕಿ ನಾಯಕರ ಸಂಘದ ಕಚೇರಿಗೆ ಭೇಟಿ ವಾಲ್ಮೀಕಿ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಚಿಕ್ಕಭೇರ್ಯ ಮಹದೇವ್, ಎಸ್.ಎನ್.ಮಂಜುನಾಥ, ವೆಂಕಟೇಶ ನಾಯಕ, ಸಂತೋಷ್ ಇತರರಿದ್ದರು.
Published on

ಸಾಲಿಗ್ರಾಮ: ತಾಲೂಕು ವಾಲ್ಮೀಕಿ ನಾಯಕರ ಸಂಘಕ್ಕೆ ನೂತನ ಕಚೇರಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ನನ್ನ ಸ್ವಂತ ಜಾಗ ಕೊಡುವೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ತಿಳಿಸಿದರು.

ಸಾಲಿಗ್ರಾಮ ಪಟ್ಟಣದಲ್ಲಿ ನೂತನವಾಗಿ ತೆರೆಯಲಾದ ತಾಲೂಕು ವಾಲ್ಮೀಕಿ ಸಂಘದ ಕಚೇರಿಗೆ ಭೇಟಿ ನೀಡಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸಮಾಜದಲ್ಲಿ ಗುರು ಹಿರಿಯರನ್ನ ಗೌರವಿಸುವ ಮೂಲಕ ಎಲ್ಲರನ್ನೂ ಸಂಘಟಿತರನ್ನಾಗಿ ಮಾಡಿಕೊಂಡು ತಾಲೂಕು ಸಂಘ ಒಟ್ಟಾರೆ ಅಭಿವೃದ್ಧಿ ಆಗಬೇಕಿದೆ. ಸಮಾಜದಲ್ಲಿ ಸಾಕಷ್ಟು ಜನ ಬಡತನದ ರೇಖೆಯಲ್ಲಿ ವಾಸ ಮಾಡುತ್ತಿದ್ದರು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದರಲ್ಲಿ ಎಲ್ಲೂ ಹಿಂದೆ ಉಳಿಯುತ್ತಿಲ್ಲ. ವಾಲ್ಮೀಕಿ ಸಮಾಜಕ್ಕೆ ಸೇರಿದ ಒಬ್ಬ ನಿಷ್ಠಾವಂತ ದಕ್ಷ ಐಪಿಎಸ್ ಅಧಿಕಾರಿಯನ್ನು ಅಮಾನತು ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಏನೂ ತಪ್ಪು ಮಾಡದ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಸಂಘಟನೆಗಳು ಅವರ ಪರವಾಗಿ ನಿಲ್ಲುವುದು ನಿಜವಾದ ಸಂಘಸಂಸ್ಥೆಗಳ ಕರ್ತವ್ಯ ಎಂದರು.

ಈಗ ಖಾಸಗಿ ಕಟ್ಟಡದಲ್ಲಿ ಕಚೇರಿಯನ್ನು ತೆರೆದು ಸಂಘಟಿತರಾಗುತ್ತಿರುವ ವಾಲ್ಮೀಕಿ ಸಮಾಜಕ್ಕೆ ಶೀಘ್ರದಲ್ಲೇ ಪಟ್ಟಣದಲ್ಲಿ ಸಂತ ಕಚೇರಿ ನಿರ್ಮಾಣ ಮಾಡಿಕೊಳ್ಳಲು ತಮ್ಮ ಸ್ವಂತ ಜಾಗ ನೀಡುವೆ. ಸಂಘ ಸಂಸ್ಥೆಗಳು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಬಾರದು. ಸ್ವಂತ ಶಕ್ತಿಯಿಂದ ಸಮಾಜದಲ್ಲಿ ನೊಂದ ಜನರ ನೆರಳಾಗಬೇಕು ಎಂದರು.

ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಚಿಕ್ಕಭೇರ್ಯ ಮಹದೇವ್, ರಾಜ್ಯ ಎನ್‌ಪಿಎಸ್ ನೌಕರರ ತಾಲೂಕು ಅಧ್ಯಕ್ಷ ಎಸ್.ಎನ್.ಮಂಜುನಾಥ , ಸಂಘದ ವೆಂಕಟೇಶ ನಾಯಕ, ಖಜಾಂಚಿ ಸಂತೋಷ್, ಗೋಬಿ ಶಂಕರನಾಯಕ, ಬೈರೇಶ್, ದೇವರಾಜ್, ಕೃಷ್ಣನಾಯಕ, ಎಸ್.ಬಿ. ಮಹದೇವ್, ಸ್ವಾಮಿನಾಯಕ, ಕಲಾವಿದ ಕುಮಾರ್, ಮಿರ್ಲೆ ವೆಂಕಟೇಶನಾಯಕ, ಮಂಜುನಾಥ್, ಮಲ್ಲಿಕಾರ್ಜುನ್, ತಿಮ್ಮನಾಯಕ, ಲೋಕೇಶ್ ನಾಯಕ, ರಾಮನಾಯಕ, ಚಂದ್ರನಾಯಕ, ಕುಬೇರ ನಾಯಕ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net