ಲಾಠಿ ಬೀಸಿದ ಪೊಲೀಸರನ್ನು ಅಮಾನತುಗೊಳಿಸಿ

13 MUL 1
Published on

ಮುಳಗುಂದ:  ಬೆಳಗಾವಿಯ ಸುವರ್ಣಸೌಧ ಮುಂದೆ 2ಎ ಮೀಸಲಾತಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು ಖಂಡನೀಯ. ಲಾಠಿ ಚಾರ್ಜ್ ಮಾಡಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಮುಳಗುಂದ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಪಪಂ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಘಟಕದ ಅಧ್ಯಕ್ಷ ಮಹಾಂತೇಶ ಬಾತಾಖಾನಿ ಮಾತನಾಡಿ, ತಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮಾಜದ ವಿರುದ್ಧ ರಾಜ್ಯ ಸರ್ಕಾರ ಪೊಲೀಸರಿಂದ ಲಾಠಿ ಪ್ರಹಾರ ಮಾಡಿರುವುದು ಅಕ್ಷಮ್ಯ ಅಪರಾಧ. ಮುಖಂಡರಿಗೆ ರಕ್ತ ಬರುವಂತೆ ಪೊಲೀಸರು ಹಲ್ಲೆ ಮಾಡಿರುವುದು ಖಂಡನೀಯ. ಸರ್ಕಾರ ಪಂಚಮಸಾಲಿ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸಿ.ಎಸ್.ಪತ್ರಿ, ಎಂ.ಪಿ. ಮಜ್ಜಿಗುಡ್ಡ, ಎಂ.ಎಸ್. ಬಳ್ಳಾರಿ, ಎಂ.ಡಿ. ನರಗುಂದ, ಸಿದ್ರಾಮಯ್ಯ ಹಿರೇಮಠ, ಎ.ಎನ್. ಬಾತಾಖಾನಿ, ಕೆ.ಎ. ಬಾತಾಖಾನಿ, ಎಂ.ವೈ. ಕುಂಬಾರ, ಲಕ್ಷ್ಮಣ ಇಂಗಳಹಳ್ಳಿ, ಮೋಹನ ಮದ್ದಿನ, ಮಲ್ಲಕಾಜಪ್ಪ ಉಜ್ಜಣ್ಣವರ, ಬಿ.ಟಿ. ಕಾಳೆ, ಟಿ.ಎಂ. ಕಾಳೆ, ತಿಪ್ಪಣ್ಣ ಬಂಡಿ, ವೀರೇಶ ಅಕ್ಕಿ, ಸಿದ್ದು ಅಕ್ಕಿ, ಶರಣಪ್ಪ ಬಂಗಾರಿ ಇತರರು ಇದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net