ಚುನಾವಣಾ ಕರ್ತವ್ಯ ಲೋಪ, ಅಮಾನತು

IMG-20230411-WA0018
Published on

ವಿಜಯವಾಣಿ ಸುದ್ದಿಜಾಲ ಗದಗ,
ಚುನಾವಣಾ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ರೋಣ ತಾಲೂಕಿನ ಮಲ್ಲಾಪುರ ಉಪವಿಭಾಗದ ಎಂಆರ್​ಬಿಸಿ ಜೆಇ ಮಹೇಶ ರಮಾವತ ಅವರನ್ನು ತಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್​ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಮಹೇಶ ರಮಾವತ ಅವರನ್ನು 67&ರೋಣ ವಿಧಾನಸಭಾ ೇತ್ರದ ವ್ಯಾಪ್ತಿಯಲ್ಲಿ ಬರುವ ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ&ರೋಣ ರಸ್ತೆ, ಪುರ್ತಗೇರಿ ಕ್ರಾಸ್​ ಚೆಕ್​ ಪೋಸ್ಟನಲ್ಲಿ ತನಿಖಾ ಕಾರ್ಯವನ್ನು ನಿರ್ವಹಿಸಲು ಆದೇಶಿಸಲಾಗಿತ್ತು. ಸದರಿಯವರು ನಿಗದಿತ ಆದೇಶದಂತೆ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗಿ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ$್ಯ ಹಾಗೂ ಬೇಜವಾಬ್ದಾರಿತನ ತೋರಿಸಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134ರ ಉಲ್ಲಂನೆ ಮಾಡಿದ ಮಹೇಶ ರಮಾವತ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net