ಅಬ್ಬೆಹಿತ್ಲು ಸ್ಮಶಾನದಲ್ಲಿ ವಾಮಾಚಾರ ಶಂಕೆ

9 Vamachara
Published on

ಭಟ್ಕಳ: ತಾಲೂಕಿನ ಬೆಳಕೆ ಪಂಚಾಯಿತಿ ವ್ಯಾಪ್ತಿಯ ಅಬ್ಬೆಹಿತ್ಲು ಸ್ಮಶಾನದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ, ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷೆ ಪೋಟೋಗಳು ಸಿಕ್ಕಿದ್ದು, ವಾಮಾಚಾರ ಶಂಕೆ ವ್ಯಕ್ತಪಡಿಸಿ ನೋಡಿದವರು ಮುಖಂಡರ ಗಮನಕ್ಕೆ ತಂದಿದ್ದಾರೆ.

ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ನಯನಾ ನಾಯ್ಕ, ಉಪಾಧ್ಯಕ್ಷೆ ಸುಕನ್ಯಾ ನಾಯ್ಕ ಅವರ ಪೋಟೋಗಳು ಅಬ್ಬಿಹಿತ್ಲು ಸ್ಮಶಾನದಲ್ಲಿ ಕಂಡು ಬಂದಿವೆ. ಇದನ್ನು ನೋಡಿದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇತ್ತೀಚೆಗೆ ಅಂತ್ಯಸಂಸ್ಕಾರಕ್ಕೆಂದು ತೆರಳಿದ ಕೆಲವರಿಗೆ ಒಂದು ಮಡಕೆ ಕಾಣಿಸಿದೆ. ಕುತೂಹಲಗೊಂಡು ಮಡಕೆ ಒಡೆದಾಗ ಅದರಲ್ಲಿ ಪೋಟೊಗಳು ಕಂಡು ಬಂದಿವೆ. ಜತೆಗೆ ಬೀಗ, ಬಣ್ಣದ ದಾರಗಳು, ತಗಡಿನ ಪತ್ರ ಕಂಡು ಬಂದಿದೆ. ಸ್ಥಳೀಯರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಯನಾ ನಾಯ್ಕ, ಇದನ್ನು ಯಾರು, ಯಾವ ಕಾರಣಕ್ಕೆ ಮಾಡಿದ್ದಾರೆ ಎಂದು ತಿಳಿದಿಲ್ಲ. ನನ್ನನ್ನು ಧೈರ್ಯದಿಂದ ಎದುರಿನಿಂದ ಎದುರಿಸಲು ಸಾಧ್ಯವಾಗದ ಕಿಡಿಗೇಡಿಗಳು ಈ ಹೇಯ ಕೃತ್ಯಕ್ಕೆ ಇಳಿದಿದ್ದು ನಾಚಿಕೆಗೇಡು. ಇಂತಹ ಮೌಢ್ಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಈ ಕುರಿತು ಮುಖಂಡರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net