ಅನೈತಿಕ ಸಂಬಂಧದ ಶಂಕೆ, ತಮ್ಮನನ್ನೇ ಕೊಲೆಗೈದ ಅಣ್ಣ

Hanumantappa Lamani
Published on

ಹಾವೇರಿ: ಅನೈತಿಕ ಸಂಬಂಧದ ಹೊಂದಿರುವ ಸಂಶಯದ ಹಿನ್ನೆಲೆಯಲ್ಲಿ ಅಣ್ಣನೊಬ್ಬ ತಮ್ಮನ ಎದೆಗೆ ಚೂರಿ ಹಾಕಿ ಕೊಲೆಗೈದ ಭೀಕರ ಘಟನೆ ತಾಲೂಕಿನ ನೆಲೋಗಲ್ಲ ತಾಂಡಾ ಗ್ರಾಮದಲ್ಲಿ ಶನಿವಾರ ನಡೆದಿದೆ.

ಹನುಮಂತಪ್ಪ ಲಮಾಣಿ (42) ಮೃತ ದುರ್ದೈವಿ. ಶಂಕ್ರಪ್ಪ ಲಮಾಣಿ (55) ಕೊಲೆ ಮಾಡಿದ ಆರೋಪಿ.

ತನ್ನ ಹೆಂಡತಿ ಜತೆ ಅಕ್ರಮ ಸಂಬಂಧ ಹೊಂದಿದ ಸಂಶಯದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಶನಿವಾರ ಮದ್ಯ ಕುಡಿದು ಮನೆಗೆ ಬಂದ ಅಣ್ಣ ಶಂಕ್ರಪ್ಪ ಜಗಳ ತೆಗೆದಿದ್ದ. ಈ ವೇಳೆ ಜಗಳ ವಿಕೋಪಕ್ಕೆ ತೆರಳಿ ತಮ್ಮ ಹನುಮಂತಪ್ಪನ ಎದೆಗೆ ಚೂರಿ ಹಾಕಿದ್ದಾನೆ. ಕೂಡಲೇ ಹನುಮಂತಪ್ಪನನ್ನು ಹಾವೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಪೊಲೀಸರು ಆರೋಪಿ ಶಂಕ್ರಪ್ಪನನ್ನು ಬಂಧಿಸಿದ್ದಾರೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net