

ಪಿರಿಯಾಪಟ್ಟಣ: ಜಮೀನಿನಲ್ಲಿ ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಮೈಸೂರಿನ ಸೆನ್ ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಅಬ್ಬಳತಿ ಗ್ರಾಮದ ಮಣಿಗೌಡ ಬಂಧಿತ ಆರೋಪಿ. ಗ್ರಾಮದ ತನ್ನ ಜಮೀನಿನಲ್ಲಿ ಅಡಕೆ ಮಧ್ಯ ಬೆಳೆದಿದ್ದ 14 ಕೆಜಿ 600 ಗ್ರಾಂ ತೂಕದ 25 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೈಸೂರಿನ ಸೆನ್ ಪೊಲೀಸ್ ಠಾಣೆಯ ಡಿವೈಎಸ್ ಪಿ.ರಘು, ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್, ಸಿಬ್ಬಂದಿ ಮಂಜು, ಮೋಹನ್, ಅಭಿಷೇಕ್, ಪುನೀತ್, ಮಹೇಶ್ ಭಾಗವಹಿಸಿದ್ದರು.