ಸುಶಿಲಾತಾಯಿ ಹಿರೇಮಠ ಶಾಲೆ ಸಮಗ್ರ ವೀರಾಗ್ರಣಿ

12 DWD 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಾಥಮಿಕ ಶಾಲಾ ಮಕ್ಕಳ ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಅಮ್ಮಿನಬಾವಿ ಗ್ರಾಮದ ಶ್ರೀ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.
ಬಾಲಕರ ವಿಭಾಗದ ಗುಂಪು ಆಟಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಕಬಡ್ಡಿ, ಥ್ರೋಬಾಲ್ ಹಾಗೂ ವಾಲಿಬಾಲ್ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದರು. ಬಾಲಕಿಯರ ವಿಭಾಗದ ಗುಂಪು ಆಟಗಳಲ್ಲಿ ಥ್ರೋಬಾಲ್ ಹಾಗೂ ವಾಲಿಬಾಲ್ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದರೆ, ಖೋಖೋದಲ್ಲಿ ದ್ವಿತೀಯ ಸ್ಥಾನ ಪಡೆದರು.
ಮೇಲಾಟಗಳ ಬಾಲಕರ ವಿಭಾಗದ 600 ಮೀ. ಓಟದಲ್ಲಿ ಪ್ರವೀಣ ಮÁಯಣ್ಣಿ ಪ್ರಥಮ, ಸಮರ್ಥ ರಸಾಳೆ ದ್ವಿತೀಯ, ಬಾಲಕಿಯರ 200 ಮೀ. ಓಟದಲ್ಲಿ ಅಕ್ಷರಾ ದೇಸಾಯಿ ಪ್ರಥಮ, ಅಡೆತಡೆ ಓಟದಲ್ಲಿ ಶ್ರೀಧರ ಬ್ಯಾಕೋಡ, ಪ್ರವೀಣ ಮÁಯಣ್ಣಿ, ಪ್ರಜ್ವಲ್ ಯಲಿವಾಳ ಹಾಗೂ ವಿನಾಯಕ ಗುಡಿ ಅವರಿದ್ದ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಆರ್‌ಪಿ. ಬಸವರಾಜ ಕುರಗುಂದ, ಶಂಕರ ಘಟ್ಟಿ, ಟಿ.ಎಂ. ದೇಸಾಯಿ, ಕೃಷ್ಣ ಬೋಂಗಾಳೆ, ಸುಕನ್ಯಾ ಲೋಕೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net