ನೇಶ್ವಿ ಗ್ರಾಮ ಪಂಚಾಯಿತಿಗೆ ಸುಶೀಲಾ ಅಧ್ಯಕ್ಷೆ

25 RTL 1
Published on

ರಟ್ಟಿಹಳ್ಳಿ: ತಾಲೂಕಿನ ನೇಶ್ವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೊಡ್ಮನಿ ಸುಶೀಲಾ ಮಂಜುನಾಥ ಅವಿರೋಧವಾಗಿ ಆಯ್ಕೆಯಾದರು.

ಶಶಿಕಲಾ ಪರಮೇಶ್ವರಪ್ಪ ದೊಡ್ಮನಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾರಿಯಾಗಿ ತಾ.ಪಂ. ಇಒ ಲಕ್ಷ್ಮೀಕಾಂತ ಬೊಮ್ಮಣ್ಣನವರ ಕಾರ್ಯ ನಿರ್ವಹಿಸಿದರು.

ದೊಡ್ಮನಿ ಸುಶೀಲಾ ಮಂಜುನಾಥ ಮಾತನಾಡಿ, ನೇಶ್ವಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ, ಗಟಾರು, ವಿದ್ಯುತ್ ವ್ಯವಸ್ಥೆ ಮತ್ತು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಶೈಕ್ಷಣಿಗೆ ಚಟುವಟಿಕೆಗಳಿಗೆ ಸಹಕಾರ ನೀಡಲಾಗುವುದು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಮಹೇಶಪ್ಪ ಚಳಗೇರಿ ಮಾತನಾಡಿ, ಕಳೆದ 15 ದಿನಗಳಿಂದ ಬಹುಗ್ರಾಮ ನದಿ ನೀರು ಯೋಜನೆಯಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿತಪ್ರಮಾಣದಲ್ಲಿ ನೀರು ಪೂರೈಸಲಾಗುತ್ತಿದೆ. ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ತಾಪಂ ಇಒಗೆ ಮನವಿ ಮಾಡಿದರು.

ಗ್ರಾಪಂ ಉಪಾಧ್ಯಕ್ಷೆ ಸವಿತಾ ಕುಂಬಾರ, ಗ್ರಾ.ಪಂ. ಸದಸ್ಯರಾದ ಮಹೇಶಪ್ಪ ಚಳಗೇರಿ, ಸಿದ್ದನಗೌಡ ಪಾಟೀಲ, ಶಶಿಕಲಾ ದೊಡ್ಮನಿ, ಲಕ್ಷ್ಮಮ್ಮ ಮಡಿವಾಳರ ಪಿಡಿಒ ಶಿವರಾಜ ಎಸ್., ಗ್ರಾಮಸ್ಥರಾದ ಶಿವಲಿಂಗಪ್ಪ ಬೆನಕನಕೊಂಡ, ಈರಣ್ಣ ಬೆನಕನಕೊಂಡ, ಹನುಮಂತಪ್ಪ ಮಾವಿನತೋಪ, ಚಿಕ್ಕಪ್ಪ ಬಾಲಕ್ಕನವರ, ಕರಬಸಣ್ಣ ಹಿರೇಅಜ್ಜೇರ, ಮಾಲತೇಶ ಬಕ್ಕೂರ, ಸೋಮಣ್ಣ ಬೊಮ್ಮಣ್ಣನವರ, ಪರಮೇಶಪ್ಪ ದೊಡ್ಮನಿ, ರವೀಂದ್ರ ಬಣಕಾರ, ವೀರಣ್ಣ ಬೆನಕನಕೊಂಡ, ವೀರೇಶ ದಾನಪ್ಪನವರ, ಹನುಮಂತಪ್ಪ ಗಾಜೇರ, ಗ್ರಾ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net