

ಬೆಂಗಳೂರು: ದೇಶ ಎದುರಿಸುತ್ತಿರುವ ಬಹುತೇಕ ಎಲ್ಲ ಸಮಸ್ಯೆಗಳಿಗೆ ಉತ್ತಮ ಆಡಳಿತ (ಸುಶಾಸನ) ಪರಿಹಾರವಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಮಾಜಿಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಅಂಗವಾಗಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ದಿವಾನರಪಾಳ್ಯದಲ್ಲಿರುವ ಅಟಲ್‌ಜಿ ಉದ್ಯಾನವನದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸುಶಾಸನ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿಯವರು ದೇಶ ಕಂಡ ಮಹಾನ್ ನಾಯಕ. ಭಾರತದ ನವನಿರ್ಮಾಣ ಶಿಲ್ಪಿಯಾಗಿದ್ದ ಅವರ ದೂರದೃಷ್ಟಿಯ ಲವನ್ನು ಇಂದು ದೇಶ ಅನುಭವಿಸುತ್ತಿದೆ. ಓರ್ವ ಆಡಳಿತಗಾರರಾಗಿ, ಕವಿಯಾಗಿ, ಮುತ್ಸದ್ಧಿ ರಾಜಕಾರಣಿಯಾಗಿ ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಆಡಳಿತದ ವೈಖರಿ ಎಲ್ಲರಿಗೂ ಮಾದರಿ. ಆ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ವಾಜಪೇಯಿ ಜನ್ಮದಿನವನ್ನು ಸುಶಾಸನ ದಿನಾಚರಣೆ ಎಂಬುದಾಗಿ ೋಷಣೆ ಮಾಡಿದರು. ಉತ್ತಮ ಆಡಳಿತದಿಂದ ದೇಶದ ಅಭಿವೃದ್ಧಿ, ಪ್ರಗತಿ, ಭ್ರಷ್ಟಾಚಾರ ನಿರ್ಮೂಲನೆ, ಬಡವರ ಕಲ್ಯಾಣ ಇತ್ಯಾದಿ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಾಜಪೇಯಿ ಜನ್ಮದಿನವು ಅಂತಹ ಉತ್ತಮ ಆಡಳಿತ ನೀಡಲು ಪ್ರೇರಣೆ ನೀಡುತ್ತದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು. ಉದ್ಯಾನವನದಲ್ಲಿರುವ ಪ್ರತಿಮೆಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ನಿಪುಣ್ ಭಾರತ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಖ್ಯಾತ ಭಾಷಣಕಾರ ಪ್ರೊ.ಕೃಷ್ಣೇಗೌಡ, ಹಿಮಾಂಶು ಶಿಕ್ಷಣ ಸಂಸ್ಥೆಯ ನಿರ್ದೇಶಕ ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ಧರಾಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರಘುಚಂದ್ರ, ಶಿಕ್ಷಣ ಫೌಂಡೇಶನ್‌ನ ಪ್ರಸನ್ನ, ಮಾಜಿ ಕಾಪೋರೇಟರ್‌ಗಳಾದ ಜಯಪಾಲ್, ಮುನಿಸ್ವಾಮಿ, ಕೇಶವ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಕೇವಲ ದೇಶದ ಪ್ರಧಾನಿ, ರಾಜಕೀಯ ನಾಯಕ, ಕವಿ ಎನ್ನುವುದಕ್ಕಿಂತ ಹೆಚ್ಚಾಗಿ ಓರ್ವ ದಾರ್ಶನಿಕರಾಗಿದ್ದರು. ಅವರಿಗೆ ಈ ದೇಶದ ಆತ್ಮದ ಅರಿವಿತ್ತು ಎಂದು ಭಾಷಣಕಾರ ಪ್ರೊ.ಕೃಷ್ಣೇಗೌಡ ವ್ಯಾಖ್ಯಾನಿಸಿದರು. ಸುಶಾಸನ ದೊರೆಯಬೇಕಾದರೆ ಅಧಿಕಾರ ನಡೆಸುವವರು ಮತ್ತು ಅಧಿಕಾರ ಯಂತ್ರ ಪರಸ್ಪರ ಅರಿತು ಕೆಲಸ ಮಾಡಬೇಕು. ರಾಜಕಾರಣಿಗಳು ಸಾಮಾನ್ಯವಾಗಿ ಓಟಿಗಾಗಿ ಜನಪ್ರಿಯ ಕೆಲಸಗಳನ್ನು ಮಾಡುತ್ತಾರೆ. ಆದರೆ ದೇಶದ ಭವಿಷ್ಯವನ್ನು ನಿರ್ಮಿಸುವ ಕೆಲಸ ಮಾಡುವವರು ಮುತ್ಸದ್ಧಿಗಳಾಗುತ್ತಾರೆ. ಆ ನಿಟ್ಟಿನಲ್ಲಿ ವಾಜಪೇಯಿಯಂತಹ ಮಹಾನ್ ನಾಯಕರನ್ನು ಅನುಸರಿಸುವ ಮೂಲಕ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಕೃಷ್ಣೇಗೌಡರು ಪ್ರಶಂಸಿಸಿದರು.
ಮಕ್ಕಳ ಬೌದ್ಧಿಕ ಶಿಕ್ಷಣವನ್ನು ಸುಧಾರಿಸಲು ಬುನಾದಿಯಲ್ಲಿಯೇ ಪರಿಪಕ್ವ ಮಾದರಿಯನ್ನು ಅಳವಡಿಸಿಕೊಳ್ಳಲು ಕೇಂದ್ರದ ನಿಪುಣ್ ಭಾರತ್ ಯೋಜನೆ ಮಹತ್ವದ್ದಾಗಿದೆ. ನ್ಯಾಷನಲ್ ಇನೀಷಿಯೇಟಿವ್ ಾರ್ ಪ್ರೊಫಿಶಿಯೆನ್ಸಿ ಇನ್ ರೀಡಿಂಗ್ ವಿತ್ ಅಂಡರ್‌ಸ್ಟಾೃಂಡಿಂಗ್ ಆ್ಯಂಡ್ ನ್ಯೂಮರಿಕ್ (NIPUN) ಯೋಜನೆಯ ಪ್ರಕಾರ 9 ವರ್ಷದೊಳಗೆ ಮಕ್ಕಳಿಗೆ ಮುಂದಿನ ಭವಿಷ್ಯವನ್ನು ನಿರ್ಧರಿಸಲು ಬೇಕಾದ ಬುನಾದಿ ಶಿಕ್ಷಣಕ್ರಮವನ್ನು ಕಲಿಸಬೇಕು. ಕನಿಷ್ಟ 7ನೇ ತರಗತಿ ಮುಗಿಯುವುದರೊಳಗಾಗಿ ನಿಪುಣ್ ತರಬೇತಿಗೊಳಿಸಬೇಕೆಂಬ ನಿಯಮವಿದೆ. ದೇಶದಲ್ಲಿ ಶೇ.50ರಷ್ಟು ಸಾಧನೆಯನ್ನು ಮಾತ್ರ ಮಾಡಲು ಸಾಧ್ಯವಾಗಿದ್ದು, ದೇಶದಲ್ಲೇ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಅತಿಹೆಚ್ಚು ಶೇ.85ರಷ್ಟು ಪ್ರಗತಿ ಸಾಧಿಸಿದ್ದು, ಶಿಕ್ಷಣ ಫೌಂಡೇಶನ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ. ಕೆಲವೇ ದಿನಗಳಲ್ಲಿ ಶೇ.100 ಪ್ರಗತಿ ಸಾಧಿಸಲು ಶಾಸಕ ಡಾ.ಅಶ್ವತ್ಥ ನಾರಾಯಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.