

ಹಿರೇಕೆರೂರ: ಭಾರತೀಯ ಜನತಾ ಪಾರ್ಟಿ ಹಿರೇಕೆರೂರು ಮಂಡಲದ ವತಿಯಿಂದ ಬುಧವಾರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಾಗೂ ಸುಶಾಸನ ದಿನ ಆಚರಿಸಲಾಯಿತು.
ಮಂಡಲದ ಅಧ್ಯಕ್ಷ ಶಿವಕುಮಾರ್ ತಿಪ್ಪಶೆಟ್ಟಿ, ರಾಜ್ಯ ಎಸ್.ಟಿ. ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಎನ್.ಎಂ. ಈಟೇರ, ಪಕ್ಷದ ಮುಖಂಡರಾದ ಎಸ್.ಎಸ್. ಪಾಟೀಲ್, ಜಿ. ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ನಿಂಗಾಚಾರ್, ಮಾಯಾಚಾರಿ, ಪಪಂ ಸದಸ್ಯರಾದ ಗುರುಶಾಂತ ಎತ್ತಿನಹಳ್ಳಿ, ಹನುಮಂತಪ್ಪ ಕುರುಬರ, ಹರೀಶ್ ಕಲಾಲ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ತಿರಕಪ್ಪನವರ, ಮೋರ್ಚಾ ಅಧ್ಯಕ್ಷರಾದ ಜಗದೀಶ ದೊಡ್ಡಗೌಡ್ರು, ಮನೋಹರ ಒಡ್ಡಿನಕಟ್ಟಿ, ಮುಖಂಡರಾದ ಬಸವರಾಜ ಚಿಂದಿ, ಬಸವರಾಜ್ ಅರಕೇರಿ, ರಾಮಣ್ಣ ಮುರುಡೇಶ್ವರ, ಉಮೇಶ್ ಬಣಕಾರ, ಹುಚ್ಚಣ್ಣ ಚೌಟಗಿ, ರುದ್ರೇಶ್ ನೀಲನಗೌಡ್ರು, ಪ್ರವೀಣ್ ಸಣ್ಣಕ್ಕಿ, ಮಹೇಶ ಭರಮಗೌಡರ್, ಹೊನ್ನಪ್ಪ ಸಾಲಿ, ಈರಣ್ಣ ಚಿಟ್ಟೂರ್, ಜಿತೇಂದ್ರ ಅಂಗಡಿ, ನಾಗರಾಜ್ ರಾಯನಗೌಡ್ರ, ನಾಗರಾಜ್ ಮಾಳೂರ್, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.